ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ನಿನ್ನೆ ರಾತ್ರಿ ಸುರಿದ ಮಳೆಗೆ ಬಾಪೂಜಿನಗರ ಹಾಗೂ ಟ್ಯಾಂಕ್ ಮೊಹಲ್ಲಾ ಭಾಗದ ಅನೇಕ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಯಿತು.
ಬಾಪೂಜಿ ನಗರದ 8ನೆಯ ಕ್ರಾಸ್ ಆದಿಶಕ್ತಿ ಗಂಗಾಂಬಿಕ ದೇವಾಲಯದ ಬಳಿ ಮರ ಬಿದ್ದು, ವಿದ್ಯುತ್ ಕಂಬ ಮುರಿದು, ಸಂಪರ್ಕ ಕಡಿತಗೊಂಡು ಜನರು ಪರದಾಡುವಂತಾಯಿತು.
ರಾತ್ರಿ ಮಳೆಯಲ್ಲೂ ಪಾಲಿಕೆ ವತಿಯಿಂದ ಜೆಸಿಬಿ ತರಿಸಿ, ದುರಸ್ತಿ ಕಾರ್ಯ ಪ್ರಾರಂಭಿಸಲಾಯಿತು. ಆ ಸಮಯದಲ್ಲಿ ಪೌರ ಕಾರ್ಮಿಕರು ಹಾಜರಿದ್ದು, ಮಳೆನೀರು ಸರಾಗವಾಗಿ ಹರಿದು ಹೋಗಲು ಅನುವು ಮಾಡಿಕೊಟ್ಟರು.
ಪಾಲಿಕೆ ಸದಸ್ಯೆ ಸುರೇಖಾ ಮುರಳೀಧರ್, ಮುರಳೀಧರ್, ಪಾಲಿಕೆ ಆಯುಕ್ತ ಚಿದಾನಂದ ವಟಾರೆ, ಪರಿಸರ ಅಭಿಯಂತರರಾದ ರಾಘವೇಂದ್ರ, ಮೆಸ್ಕಾಂ ಇಂಜಿನಿಯರ್ ನಂದೀಶ್, ಮೆಸ್ಕಾಂ ಸಿಬ್ಬಂದಿ ಉಪಸ್ಥಿತಿಯಲ್ಲಿ ದುರಸ್ತಿ ಕಾರ್ಯ ನಡೆಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post