ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ರೋಟರಿ ಕ್ಲಬ್‍ನ ನೂತನ ಪದಾಧಿಕಾರಿಗಳಾಗಿ ಪದಗ್ರಹಣ ಸಮಾರಂಭವು ಜು.8ರ ಸಂಜೆ 6.30ಕ್ಕೆ ಎಲ್‍ಬಿಎಸ್ ನಗರದಲ್ಲಿರುವ ರೋಟರಿ ಯುವ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕ್ಲಬ್‍ನ ನೂತನ ಅಧ್ಯಕ್ಷ ಕೆ. ಸೂರ್ಯ ನಾರಾಯಣ ಉಡುಪ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 1958ರಲ್ಲಿ ಉದ್ಘಾಟನೆಗೊಂಡ ಶಿವಮೊಗ್ಗ ರೋಟರಿ ಕ್ಲಬ್ ಸಮಾಜ ಸೇವಾ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತ ಬಂದಿದೆ. ಸೇವೆ ಅಮೂಲ್ಯ ಕಾರ್ಯವೆಂಬ ಆದರ್ಶವನ್ನು ಬೆಳೆಸಿ ಉತ್ತೇಜಿಸುವುದು ಸಂಸ್ಥೆಯ ಗುರಿಯಾಗಿದೆ ಎಂದರು.
ಕ್ಲಬ್ ಆಶಾಕಿರಣ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ 40 ವರ್ಷಗಳಿಂದ ವಿಶೇಷ ಚೇತನ ಮಕ್ಕಳಿಗೆ ತರಬೇತಿ ನೀಡಲಾಗಿದೆ. ಸುಮಾರು 1200ಕ್ಕೂ ಹೆಚ್ಚು ಮಕ್ಕಳು ಇಲ್ಲಿ ತರಬೇತಿ ಪಡೆದು ಸ್ವತಂತ್ರ್ಯ ಜೀವನ ನಡೆಸುತ್ತಿದ್ದಾರೆ. ಹಾಗೆಯೇ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ ಎಂದರು.
Also read: ಒಮ್ಮೆ ರಕ್ತದಾನ ಮಾಡುವುದರಿಂದ ಮೂರ್ನಾಲ್ಕು ಜೀವ ಉಳಿಸಲು ಸಾಧ್ಯ | ಡಾ. ನಟರಾಜ್
ನಮ್ಮ ನಡುಗೆ ಹಳ್ಳಿಯ ಕಡೆಗೆ ಗ್ರಾಮೀಣ ಪ್ರದೇಶದಲ್ಲಿ ವೈದ್ಯಕೀಯ ತಪಾಸಣೆ ಶಿಬಿರ, ಆರೋಗ್ಯ ರಕ್ಷಣೆಗೆ ತಜ್ಞವೈದ್ಯರಿಂದ ಉಪನ್ಯಾಸ ಸಿಂಗಲ್ ಯೂಸ್ ಪ್ಲಾಸ್ಟಿಕ್ ಬಳಕೆ ಬಗ್ಗೆ ಜಾಗೃತಿ ಜಾಥಾ, ಮಹಿಳಾ ಸಬಲೀಕರಣ ಕಾರ್ಯಕ್ರಮ , ಮಹಿಳೆಯರಿಗೆ ಮತ್ತು ಯುವ ಜನತೆಗೆ ಕಾನೂನು ಮಾಹಿತಿ ಶಿಬಿರ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಈ ವರ್ಷ ಹಮ್ಮಿಕೊಳ್ಳಲಾಗಿದೆ ಎಂದರು.
ಪದಗ್ರಹಣ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಕ್ಲಬ್‍ನ ಮಾಜಿ ರಾಜ್ಯಪಾಲರಾದ ಆನಂದಕುಲಕರ್ಣಿ ಆಗಮಿಸಲಿದ್ದು, ಝೋನ್-10ರ ಅಸಿಸ್ಟೆಂಟ್ ಗವರ್ನರ್ ಎಸ್.ಆರ್.ನಾಗರಾಜ್, ಝೋನಲ್ ಲೆಫ್ಟಿನೆಂಟ್ ಹೆಚ್.ವಿ.ಆದರ್ಶ ಉಪಸ್ಥಿತರಿರುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಾ.ಪಿ.ನಾರಾಯಣ್, ವೀರಣ್ಣ ಹುಗ್ಗಿ, ಎನ್.ವಿ.ಭಟ್, ದಶರಥ್ ಉಪಸ್ಥಿತರಿರುವರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post