ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆ ಶಿವಮೊಗ್ಗ ಜಿಲ್ಲೆಯ ಮೂರು ಪ್ರಮುಖ ಜಲಾಶಯಗಳಿಗೆ ಒಳ ಹರಿವು ಹೆಚ್ಚಳವಾಗಿದೆ. ತುಂಗಾ ಜಲಾಶಯದಲ್ಲಿ ಈಗಾಗಲೇ ಕ್ರಸ್ಟ್ ಗೇಟ್ ಮೂಲಕ ನೀರು ಹೊರ ಬಿಡಲಾಗುತ್ತಿದೆ.
ಇನ್ನು, ಭದ್ರಾ ಮತ್ತು ಲಿಂಗನಮಕ್ಕಿ ಡ್ಯಾಂಗಳಿಗೆ ಒಳ ಹರಿವು ಏರಿಕೆಯಾಗಿದೆ.

ಗಾಜನೂರಿನ ತುಂಗಾ ಜಲಾಶಯ ಈಗಾಗಲೇ ಭರ್ತಿಯಾಗಿದ್ದು ಗುರುವಾರದಿಂದ ಗೇಟ್ ಮೂಲಕ ನೀರು ಹೊರ ಬಡಿಲಾಗುತ್ತಿದೆ. ನಿನ್ನೆ ಎರಡು ಗೇಟ್ ಮೂಲಕ ನೀರು ಹೊರ ಹರಿಸಲಾಗುತಿತ್ತು. ಇವತ್ತು ಆರು ಗೇಟ್‍ಗಳ ಮೂಲಕ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ತುಂಗಾ ಡ್ಯಾಂಗೆ 11,342 ಕ್ಯೂಸೆಕ್ ಒಳಹರಿವು ದಾಖಲಾಗಿದೆ. ಅಷ್ಟೇ ಪ್ರಮಾಣದ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ.
Also read: ರಾಜಕೀಯ ಬಿಟ್ಟು ರಾಜ್ಯದ ಅಭಿವೃದ್ದಿಗೆ ಕೈಜೋಡಿಸಿ | ರಾಜ್ಯ ಸರ್ಕಾರಕ್ಕೆ ಕುಮಾರಸ್ವಾಮಿ ಸಲಹೆ
ಭದ್ರಾ ಜಲಾಶಯಕ್ಕು ಒಳ ಹರಿವು ಏರಿಕೆಯಾಗಿದೆ. ಇವತ್ತು 8655 ಕ್ಯೂಸೆಕ್ ಒಳ ಹರಿವು ದಾಖಲಾಗಿದೆ. ಸದ್ಯ ಜಲಾಶಯದ ನೀರಿನ ಮಟ್ಟ 122.3 ಅಡಿ ಇದೆ. ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ಒಳ ಹರಿವು ಮತ್ತಷ್ಟು ಏರಿಕೆಯಾಗುವ ನಿರೀಕ್ಷೆ ಇದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post