ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಅಂಗನವಾಡಿ ಮಕ್ಕಳಿಗೆ ಹಾಗೂ ಗರ್ಭಿಣಿ, ಬಾಣಂತಿಯರಿಗೆ ಸರ್ಕಾರದ ವತಿಯಿಂದ ಉಚಿತವಾಗಿ ನೀಡುತ್ತಿರುವ ಪೌಷ್ಠಿಕ ಆಹಾರದ ದರವನ್ನು 2 ರೂ.ಗಳಷ್ಟು ರಾಜ್ಯ ಸರ್ಕಾರ ಹೆಚ್ಚು ಮಾಡಬೇಕೆಂದು ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಗೌಡ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಶಿವಮೊಗ್ಗ ಜಿಲ್ಲೆ ಸೇರಿದಂತೆ ರಾಜ್ಯದಾದ್ಯಂತ ಅಂಗನವಾಡಿಯಲ್ಲಿ ಓದುತ್ತಿರುವ 3 ವರ್ಷದಿಂದ 6 ವರ್ಷದೊಳಗಿನ ಮಕ್ಕಳು, ಗರ್ಭಿಣಿ ಮತ್ತು ಬಾಣಂತಿಯರು ಸೇರಿ ಒಟ್ಟು 28 ಲಕ್ಷದಷ್ಟಿದ್ದು, ರಾಜ್ಯ ಸರ್ಕಾರ ಉಚಿತವಾಗಿ ಪೌಷ್ಠಿಕ ಆಹಾರ ನೀಡುತ್ತಿದೆ. 1 ಮಗುವಿಗೆ 8 ರೂ. ಗರ್ಭಿಣಿ ಬಾಣಂತಿಯರಿಗೆ 21ರೂ.ಗಳನ್ನು 40:60 ಅನುಪಾತದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೇರಿ ನೀಡುತ್ತಿದ್ದು, ಸದರಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿರುವುದರಿಂದ ಪೌಷ್ಠಿಕ ಆಹಾರದ ದರದಲ್ಲಿ ಮಗುವಿಗೆ ನೀಡುತ್ತಿರುವ 8 ರೂ. ಅನ್ನು 10 ರೂ.ಗೆ ಹೆಚ್ಚಿಸಬೇಕು. ಹಾಗೂ ಗರ್ಭಿಣಿ ಬಾಣಂತಿಯರಿಗೆ ನೀಡುತ್ತಿರುವ 21 ರೂ.ಗಳನ್ನು 23 ರೂ.ಗೆ ಹೆಚ್ಚಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
ಕೇಂದ್ರ ಸರ್ಕಾರಕ್ಕೆ ಈ ವಿಷಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ನೆರವು ನೀಡಲು ರಾಜ್ಯಸರ್ಕಾರ ಒತ್ತಾಯಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
Also read: ಭ್ರಷ್ಟಾಚಾರದ ವಿಷಯ ಬಂದಾಕ್ಷಣ ಕೆಲವರು ಜಾತಿಯನ್ನೇ ರಕ್ಷಾ ಕವಚ ಮಾಡಿಕೊಳ್ಳುತ್ತಾರೆ: ಎಚ್’ಡಿಕೆ ತಿರುಗೇಟು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post