ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿಮಾನದಿಂದ ಹಾರುವ ತರಬೇತಿ ವೇಳೆಯಲ್ಲಿ ಪ್ಯಾರಾಚೂಟ್ #Parachute ತೆರೆಯದೇ ಆಕಾಶದಿಂದ ಕೆಳಕ್ಕೆ ಬಿದ್ದ ವೀರಸ್ವರ್ಗ ಸೇರಿದ ವಾಯುಪಡೆ ಅಧಿಕಾರಿ ಜಿ.ಎಸ್. ಮಂಜುನಾಥ್ #GSManjunath ಅವರಿಗೆ ಶಿವಮೊಗ್ಗದಲ್ಲಿ #Shivamogga ಭಾವಪೂರ್ಣ ಅಂತಿಮ ನಮನ ಸಲ್ಲಿಸಲಾಯಿತು.
ಹುತಾತ್ಮರಾದ #Martyr ಮಂಜುನಾಥ್ ಅವರ ಪಾರ್ಥಿವ ಶರೀರವನ್ನು ಇಂದು ಶಿವಮೊಗ್ಗಕ್ಕೆ ತಂದಿದ್ದು, ಹೊಳೆಬಸ್ ನಿಲ್ದಾಣದ ಬಳಿಯಲ್ಲಿ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಅಂತಿಮ ನಮನ ಸಲ್ಲಿಸಿದರು.
Also Read>> Invest Karnataka 2025 to feature 19 Country Partners and 9 dedicated pavilions: M.B. Patil
ಸಂಸದ ಬಿ.ವೈ. ರಾಘವೇಂದ್ರ, #BYRaghavendra ಶಾಸಕ ಎಸ್.ಎನ್. ಚನ್ನಬಸಪ್ಪ ಸೇರಿದಂತೆ ಹಲವು ಜನಪ್ರತಿನಿಧಿಗಳು ಹಾಗೂ ಬಿಜೆಪಿ ಕಾರ್ಯಕರ್ತರು, ಶಿವಮೊಗ್ಗದ ನಾಗರಿಕರು, ಮಾಜಿ ಸೈನಿಕರು, ಸಾರ್ವಜನಿಕರು ವೀರ ಯೋಧನಿಗೆ ಕಣ್ಣೀರ ವಿದಾಯ ಹೇಳಿದರು.
ಬಾರತೀಯ ವಾಯಪಡೆಯಲ್ಲಿ ವಾರಂಟ್ ಆಫೀಸರ್ ಆಗಿದ್ದ ಜಿ.ಎಸ್.ಮಂಜುನಾಥ್ ಅವರ ಪಾರ್ಥೀವ ಶರೀರವನ್ನು ಸೇನಾ ವಾಹನದಲ್ಲಿ ತರಲಾಗಿದೆ. ವಾಯುಪಡೆಯ ಅಧಿಕಾರಿಗಳು, ಅವರ ಕುಟುಂಬ ಸದಸ್ಯರು ಜೊತೆಗಿದ್ದರು. ಪಾರ್ಥೀವ ಶರೀರವನ್ನು ಹೊತ್ತ ವಾಹನ ಈಗ ಹೊಸನಗರಕ್ಕೆ ತೆರಳಿದೆ.ಮೃತ ವಾಯುಸೇನಾ ಅಧಿಕಾರಿಯ ಗೌರವಾರ್ಥ ಬಿಜೆಪಿ ಕಾರ್ಯಕರ್ತರು, ಶಿವಮೊಗ್ಗದ ನಾಗರಿಕರು, ಮಾಜಿ ಸೈನಿಕರು, ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ಸೇನಾ ವಾಹನದ ಜೊತೆಗೆ ಬೈಕ್ ಜಾಥಾದಲ್ಲಿ ನಡೆಸಿದರು.
ಸಮವಸ್ತ್ರ ಅಪ್ಪಿ ಪತ್ನಿ ಕಣ್ಣೀರು
ಇನ್ನು, ಹೊಳೆಬಸ್ ನಿಲ್ದಾಣದ ಬಳಿಯಲ್ಲಿ ಪತ್ನಿಯ ಶವ ಆಗಮಿಸುತ್ತಿದ್ದಂತೆಯೇ ಮಂಜುನಾಥ್ ಪತ್ನಿ ಕಲ್ಪಿತಾ ಅವರ ದುಃಖದ ಕಟ್ಟೆ ಒಡೆಯಿತು.
ತಮ್ಮ ಪತಿಯ ಸೇನಾ ಸಮವಸ್ತ್ರ ಅಪ್ಪಿಕೊಂಡು ಕಣ್ಣೀರು ಹಾಕಿದ ದೃಶ್ಯ ಕಲ್ಲನ್ನೂ ಕರಗಿಸುವಂತಿತ್ತು. ಜೊತೆಯಲ್ಲಿದ್ದ ಮುಖಂಡರು ಹಾಗೂ ಸಾರ್ವಜನಿಕರು ಇದನ್ನು ಕಂಡೂ ಅವರೂ ಸಹ ಕಣ್ಣೀರು ಹಾಕಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post