ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭಾರತವು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹಲವಾರು ಉತ್ತಮ ಸಾಧನೆಗಳು ಮಾಡಿದ್ದು, ಪ್ರಾಚೀನ ತಂತ್ರಜ್ಞಾನವಾಗಿರಲಿ ಅಥವಾ ಆಧುನಿಕವಾಗಿರಲಿ, ಜಾಗತಿ ಮಟ್ಟದಲ್ಲಿ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದೆ ಎಂದು ಸೋಮಶೇಖರಯ್ಯ ಅಭಿಪ್ರಾಯಪಟ್ಟರು.
ರಾಷ್ಟ್ರೀಯ ವಿಜ್ಞಾನ ದಿನಾಚರಣೆ #Science Day Celebration ಪ್ರಯುಕ್ತ ಪಿಇಎಸ್ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಲವಾರು ಪ್ರಯೋಗಗಳ ಮೂಲಕ ವಿಜ್ಞಾನದ ಕೌತುಕಗಳನ್ನು ಪ್ರಸ್ತುತ ಪಡಿಸಿದರು. ರೋಬೋಟಿಕ್ ಕಾರ್, ಕ್ಷಿಪಣಿಗಳ ಉಡಾವಣೆ, ರಾಸಾಯನಿಕಗಳ ಪ್ರಯೋಗಗಳು, wet & day smart dustbin, solar system ಹೀಗೆ ಹಲವಾರು ಪ್ರಯೋಗಗಳನ್ನು ಪ್ರಾಯೋಗಿಕವಾಗಿ ವಿವರಣಾತ್ಮಕಾವಗಿ ತಿಳಿಸಿಕೊಟ್ಟುರು.
Also read: ಅರ್ಥಹೀನ ಗಲಭೆಗಳಿಗೆ ಇತಿಶ್ರೀ ಹಾಡಲು ಕೇಂದ್ರ ಸರ್ಕಾರ ಮುಂದಾಗಲಿ: ಪುರುಷೋತ್ತಮ ಬಿಳಿಮಲೆ ಆಗ್ರಹ
ಚೈತ್ರ ಮತ್ತು ಸೈದಾ ಝಾಕಿಯಾ ಈ ಕಾರ್ಯಕ್ರಮದ ಕುರಿತು ರಸ ಪ್ರಶ್ನೆಯನ್ನು ನಡೆಸಿಕೊಟ್ಟರು. ಕುಮಾರಿ ಅನ್ವಿತ ಮತ್ತು ರಾಘವಿ ವಿಜ್ಞಾನದ ಪ್ರಯೋಗಳನ್ನು ಪ್ರಸ್ತುತಪಡಿಸಿದರು. ಸುಬಿಯಾ ಖಾನಂ ಮತ್ತು ಪೂರ್ವಿಕಾ ವಿಜ್ಞಾನದ ಮಹ್ವತವನ್ನು ತಿಳಿಸಿದರು. ಮತ್ತು 6ನೇ ಮತ್ತು 10ನೇ ತರಗತಿ ವಿದ್ಯಾರ್ಥಿಗಳು ವಿಜ್ಞಾನದ ಹೊಸ ಹೊಸ ಆವಿಷ್ಕರಗಳ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿಗಳು, ಮುಖೋಪಾಧ್ಯಯರು, ಸಂಯೋಜಕರು, ಶಾಲಾ ಶಿಕ್ಷಕ ವೃಂದ ಭಾಗವಹಿಸಿದ್ದರು. ಶ್ರೇಯಾ ಸ್ವಾಗತಿಸಿ, ನಿರೂಪಣೆ ಮತ್ತು ವಂದನಾರ್ಪಣೆ ಪರಿಣಿತ ನಡೆಸಿಕೊಟ್ಟರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post