ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯ (ಇಗ್ನೋ) ಜುಲೈ 2025ರ ಅವಧಿಯ ಪದವಿ ಮತ್ತು ಉನ್ನತ ಶಿಕ್ಷಣಕ್ಕಾಗಿ ಅರ್ಜಿಯನ್ನು ಕರೆದಿದ್ದು, ಪ್ರವೇಶಕ್ಕೆ ಆ.15 ಕೊನೆಯ ದಿನವಾಗಿದೆ ಎಂದು ಸಂಯೋಜನಾಧಿಕಾರಿ ಕುಮಾರಸ್ವಾಮಿ ಎನ್. ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರತಿವರ್ಷದಂತೆ ಈ ವರ್ಷವೂ ಕೂಡ ಇಗ್ನೋ ಮುಕ್ತ ವಿವಿಯು ಬಿ.ಎ., ಬಿ.ಕಾಂ., ಬಿಬಿಎಂ, ಬಿಎಸ್ಸಿ., ಎಂಎ., ಎಂಕಾಂ., ಎಂಬಿಎ., ಎಂಸಿಎ., ಎಂಎಸ್ಸಿ. ಡಿಪ್ಲಮೋ, ಪಿಜಿ ಡಿಪ್ಲಮೋ ಹಗೂ ಸರ್ಟಿಫಿಕೇಟ್ ಸೇರಿದಂತೆ ಸುಮಾರು 315 ಕೋರ್ಸ್‍ಗಳ ಪ್ರವೇಶಕ್ಕಾಗಿ ಅರ್ಜಿಗಳನ್ನು ಕರೆಯಲಾಗಿದೆ ಎಂದರು.
ಈ ಎಲ್ಲಾ ಕೋರ್ಸ್‍ಗಳು ಉದ್ಯೋಗದಲ್ಲಿರುವವರಿಗೆ ಪಡೆಯಲು ಅನುಕೂಅಲವಾಗುತ್ತದೆ. ಇಗ್ನೋದ ಎಲ್ಲಾ ಕೋರ್ಸುಗಳನ್ನು ಸುಮಾರು 5 ಜಿಲ್ಲೆಯ ವ್ಯಾಪ್ತಿಯಲ್ಲಿ ಪಡೆಯಬಹುದಾಗಿದೆ. ಇದರ ಅಧ್ಯಯನ ಕೇಂದ್ರವು ಡಿವಿಎಸ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿದೆ. ಇದರ ಕ್ರಮ ಸಂಖ್ಯೆ : 1306 ಆಗಿದೆ. ಈ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಉದ್ಯೋಗಸ್ಥರು ಮತ್ತು ರೆಗ್ಯೂಲರ್ ತರಗತಿಗೆ ಪ್ರವೇಶ ಪಡೆಯಲು ಆಗದಿರುವವರು ಇಲ್ಲಿ ತಮ್ಮ ವ್ಯಾಸಂಗವನ್ನು ಮುಂದುವರಿಸಬಹುದಾಗಿದೆ ಎಂದರು.
ಇಗ್ನೋ ಈಗಾಗಲೇ ಏ++ ಶ್ರೇಣಿಯಲ್ಲಿ ಮಾನ್ಯತೆ ಪಡೆದಿದೆ. ಭಾರತ ಸರ್ಕಾರದ ಶಿಕ್ಷಣ ಇಲಾಖೆಯ ರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಮುಕ್ತ ವಿವಿಯಾಗಿದೆ. ಬಿಎ., ಬಿ.ಕಾಂ., ಮತ್ತು ಬಿಎಸ್ಸಿ ಪದವಿಗಳಿಗೆ ಪ್ರವೇಶ ಪಡೆಯುವ ಎಸ್‍ಸಿ-ಎಸ್‍ಟಿ ವಿದ್ಯಾರ್ಥಿಗಳಿಗೆ (ಆದಾಯ 2.50 ಲಕ್ಷ) ಶೇ.50ರಷ್ಟು ರಿಯಾಯಿತಿ ಇರುತ್ತದೆ. ಅಷ್ಟೇ ಅಲ್ಲ ಪ್ರವೇಶದ ನಂತರ ಇವರು ಭಾರತ ಸರ್ಕಾರದ ವಿದ್ಯಾರ್ಥಿವೇತನಕ್ಕೆ ಅರ್ಜಿಯನ್ನು ಕೂಡ ಸಲ್ಲಿಸಬಹುದಾಗಿದೆ ಎಂದರು.
ಪರೀಕ್ಷಾ ಶುಲ್ಕ, ಪ್ರವೇಶ ಇತ್ಯಾದಿ ಹೆಚ್ಚಿನ ವಿವರಗಳಿಗೆ ಇಗ್ನೋ ಜಾಲತಾಣ hಣಣಠಿs://igಟಿouಚಿಜmissioಟಿ.smಡಿಣh.eಜu.iಟಿ ನ್ನು ಸಂಪರ್ಕಿಸಬಹುದು. ಅಥವಾ ಡಿವಿಎಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಅಧ್ಯಯನ ಕೇಂದ್ರಕ್ಕೆ ನೇರವಾಗಿ ವಿಚಾರಿಸಬಹುದು. ಈ ಅಧ್ಯಯನ ಕೇಂದ್ರವು ಸೋಮವಾರದಿಂದ ಶನಿವಾರದ ವರೆಗೆ ಬೆಳಿಗ್ಗೆ 11ರಿಂದ ಮಧ್ಯಾಹ್ನ 1 ಗಂಟೆ, ಸಂಜೆ 3.30ರಿಂದ 5.30ರ ವರೆಗೆ ಸಂಪರ್ಕಿಸಬಹುದು.
ಹೆಚ್ಚಿನ ವಿವರಗಳಿಗಾಗಿ ಮೊ.ನಂ. 78922-40342ನ್ನು ಸಂಪರ್ಕಿಸಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಧ್ಯಯನ ಕೇಂದ್ರದ ರಾಜೀವ್ ಹಾಗೂ ಡಿವಿಎಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಎಂ. ವೆಂಕಟೇಶ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post