ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕುವೆಂಪು ವಿಶ್ವವಿದ್ಯಾಲಯದ ಔದ್ಯೋಗಿಕ ರಸಾಯನ ಶಾಸ್ತ್ರ (Industrial Chemistry)ವಿಭಾಗದ ಸಂಶೋಧನಾ ವಿದ್ಯಾರ್ಥಿ ಇಂದ್ರಜಿತ್ ನಾಯ್ಕ್ ಅವರಿಗೆ ಕುವೆಂಪು ವಿಶ್ವವಿದ್ಯಾಲಯವು ಪಿ.ಹೆಚ್‍ಡಿ ಪದವಿ ನೀಡಿ ಗೌರವಿಸಿದೆ.
ಇಂದ್ರಜಿತ್ ನಾಯಕ್ ರವರು ವಿಭಾಗದ ಪ್ರಾಧ್ಯಾಪಕ ಡಾ. ಹೆಚ್.ಎಸ್. ಬೋಜ್ಯಾನಾನಾಯಕ್ ರವರ ಮಾರ್ಗದರ್ಶನದಲ್ಲಿ “ಸ್ಟಡೀಸ್ ಆನ್ ಆಪ್ಟಿಕಲ್ & ಇಮೇಜಿಂಗ್ ಪ್ರಾಪರ್ಟೀಸ್ ಆಫ್ ಸರ್ಫೇಸ್ ಮಾಡಿಫೈಡ್ ಮೆಟಲ್ ನ್ಯಾನೋಪಾರ್ಟಿಕಲ್ಸ್” ಎಂಬ ವಿಷಯದಲ್ಲಿ ಸಂಶೋಧನಾ ಮಹಾಪ್ರಬಂಧ ಸಲ್ಲಿಸಿದ್ದರು.
ಶಿವಮೊಗ್ಗ ತಾಲೂಕಿನ ಹೊಳೆಬೆನವಳ್ಳಿ ದೊಡ್ಡತಾಂಡದ ಈಶ್ವರನಾಯ್ಕ್ (ಡಿ ದರ್ಜೆ ನೌಕರ) ಮತ್ತು ದೇವಿಬಾಯಿಯವರ ಮಗನಾದ ಇವರು ಪ್ರಸ್ತುತ ರಾಜ್ಯ ವಿಧಿ ವಿಜ್ಞಾನ (ಪ್ರಯೋಗಾಲಯ- ಕರ್ನಾಟಕ ರಾಜ್ಯ ಪೊಲೀಸ್ ಬೆಂಗಳೂರು ವಿಭಾಗ)ದಲ್ಲಿ ವೈಜ್ಞಾನಿಕ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news













Discussion about this post