ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಜೆಎನ್‌ಎನ್‌ಸಿ ಎಂಜಿನಿಯರಿಂಗ್ ಕಾಲೇಜಿನ ವತಿಯಿಂದ ವೃತ್ತಿಪರ ಶಿಕ್ಷಣಕ್ಕೆ ಸಿಇಟಿ ಮತ್ತು ಕಾಮೆಡ್-ಕೆ ಮೂಲಕ ಪ್ರವೇಶಾತಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಸಿಇಟಿ ಸಂವಾದ ಸೀಟು ಆಯ್ಕೆ ಪ್ರಕ್ರಿಯೆ (option entry) ಕುರಿತ ಮಾಹಿತಿ ಕಾರ್ಯಾಗಾರವನ್ನು ನ.6ರಂದು ಶನಿವಾರ ಬೆಳಿಗ್ಗೆ 10:30ಕ್ಕೆ ಆನ್‌ಲೈನ್ ಮೂಲಕ ಏರ್ಪಡಿಸಲಾಗಿದೆ.
ಎಂಜಿನಿಯರಿಂಗ್ ಶಿಕ್ಷಣದ ಮಹತ್ವ, ವಿವಿಧ ವಿಭಾಗಗಳ ಪರಿಚಯ ಮತ್ತು ಉದ್ಯೋಗವಕಾಶಗಳು, ವಿದ್ಯಾರ್ಥಿ ವೇತನ, ಕೋರ್ಸ್‌ಗಳ ಆಯ್ಕೆಯಲ್ಲಿನ ವಿವಿಧ ಪ್ರಕ್ರಿಯೆ ಕುರಿತಾಗಿ ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಈ ಮುಂದಿನ ಗೂಗಲ್ ಫಾರ್ಮ ಲಿಂಕ್ ಬಳಸಿ https://forms.gle/coS2KFRFCjMLkrPX8 ನೊಂದಾಯಿಸಿಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9632471667, 9900987798 ಸಂಪರ್ಕಿಸುವಂತೆ ತಿಳಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post