ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಆ.9, 10ರಂದು ನಡೆದ ಶಿವಮೊಗ್ಗ ಓಪನ್ 6ನೇ ಅಂತರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ #Karate Tournament ಭಾಗವಹಿಸಿದ ಮೌಂಟ್ ಹೀರಾ ಶಾಲೆಯ 53 ವಿದ್ಯಾರ್ಥಿಗಳು ಕತಾ ಮತ್ತು ಕುಮತಿ ವಿಭಾಗದಲ್ಲಿ ವಿವಿಧ ಬಹುಮಾನಗಳನ್ನು ಪಡೆದು ಪಂದ್ಯಾವಳಿಯ 3ನೇ ಸಮಗ್ರ ಪ್ರಶಸ್ತಿ ಪಡೆದು ಶಾಲೆಗೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಪಂದ್ಯಾವಳಿಯಲ್ಲಿ ಶ್ರೀಲಂಕಾ ನೇಪಾಳ ಸೇರಿದಂತೆ ದೇಶದ 8 ರಾಜ್ಯಗಳಿಂದ ಸುಮಾರು 1800 ಕ್ರೀಡಾಪಟುಗಳು ಆಗಮಿಸಿದ್ದು, ಅದರಲ್ಲಿ ಪ್ರಥಮ ಸಮಗ್ರ ಬಹುಮಾನ ಬೆಂಗಳೂರಿನ ತಂಡಕ್ಕೆ ದ್ವಿತೀಯ ಸಮಗ್ರ ಬಹುಮಾನ ಮೂಡಿಗೆರೆ ತಂಡಕ್ಕೆ ದೊರೆತಿದ್ದು.
ಶಿವಮೊಗ್ಗ ಜಿಲ್ಲೆಯಿಂದ ಭಾಗವಹಿಸಿದ ಹಲವು ಶಾಲೆಗಳ ಪೈಕಿ ಮೌಂಟ್ ಹೀರಾ ಶಾಲೆಯು ತೃತೀಯ ಸಮಗ್ರ ಬಹುಮಾನ ಪಡೆದುಕೊಂಡಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post