ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಜೆಎನ್‌ಎನ್‌ಸಿ ಎಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗ, ಕೊಲ್ಕತ್ತ ಕ್ರಿಪ್ಟಾಲಜಿ ರಿಸರ್ಚ್ ಸೊಸೈಟಿ ಆಫ್ ಇಂಡಿಯಾ, ಜೆಎನ್‌ಎನ್‌ಸಿ ಐಇಇಇ ಮತ್ತು ಐಇಟಿಇ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಕ್ರಿಪ್ಟೊಲಜಿ ಕುರಿತ ಅಂತರಾಷ್ಟ್ರೀಯ ಕಾರ್ಯಾಗಾರವನ್ನು ನ.18 ರಿಂದ 20 ರವರೆಗೆ ಮೂರು ದಿನಗಳ ಕಾಲ ಏರ್ಪಡಿಸಲಾಗಿದೆ.
ನ.18 ರಂದು ಬೆಳಿಗ್ಗೆ 9:30ಕ್ಕೆ ಕಾಲೇಜಿನ ಆಡಳಿತ ಕಛೇರಿ ಕಟ್ಟಡದ ಸಭಾಂಗಣದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದ್ದು ಭಾರತ ಸರ್ಕಾರದ ರಾಷ್ಟ್ರೀಯ ಅಂಕಿಅಂಶ ಆಯೋಗದ ಅಧ್ಯಕ್ಷರಾದ ಡಾ.ಬಿಮಲ್ ರಾಯ್ ಉದ್ಘಾಟಿಸಲಿದ್ದಾರೆ.
ಜೆಎನ್‌ಎನ್‌ಸಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ. ನಾಗೇಂದ್ರ ಪ್ರಸಾದ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಎ.ಎಸ್.ವಿಶ್ವನಾಥ, ಉಪಾಧ್ಯಕ್ಷರಾದ ಟಿ.ಆರ್. ಅಶ್ವಥನಾರಾಯಣ ಶೆಟ್ಟಿ, ಕಾರ್ಯದರ್ಶಿಗಳಾದ ಎಸ್.ಎನ್. ನಾಗರಾಜ, ಸಹ ಕಾರ್ಯದರ್ಶಿಗಳಾದ ಅಮರೇಂದ್ರ ಕಿರೀಟಿ, ಖಜಾಂಚಿಗಳಾದ ಸಿ.ಆರ್. ನಾಗರಾಜ, ಕಾಲೇಜಿನ ಶೈಕ್ಷಣಿಕ ಡೀನ್ ಡಾ. ಪಿ. ಮಂಜುನಾಥ, ಇನ್ಫ್ರಾಸ್ಟ್ರಕ್ಚರ್ ಡೀನ್ ಡಾ.ಎಂ.ಎಂ. ರಜತ್ ಹೆಗಡೆ, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗ ಮುಖ್ಯಸ್ಥರಾದ ಡಾ.ಎಸ್.ವಿ. ಸತ್ಯನಾರಾಯಣ ಅವರು ಭಾಗವಹಿಸಲಿದ್ದಾರೆ.
ಮೂರು ದಿನಗಳ ಈ ಕಾರ್ಯಾಗಾರದಲ್ಲಿ ಇ-ವೋಟಿಂಗ್, ಯುಆರ್‌ಎಲ್ ಡಿಟೆಕ್ಷನ್, ಬ್ಲಾಕ್ ಚೈನ್ ತಂತ್ರಜ್ಞಾನದ ಮೂಲಕ ದತ್ತಾಂಶಗಳ ನಿರ್ವಹಣೆ, ಸ್ವಯಂ ಸೈಬರ್ ಸೆಕ್ಯುರಿಟಿ ನಿರ್ವಹಣೆ ಹಾಗೂ ಕ್ರಿಪ್ಟೊಗ್ರೆಫಿ ಕುರಿತ ಅನೇಕ ಆಧುನಿಕ ಆವಿಷ್ಕಾರಗಳ ಕುರಿತ ಸಂಪನ್ಮೂಲ ವ್ಯಕ್ತಿಗಳು ಚರ್ಚಿಸಲಿದ್ದಾರೆ.
ಎನ್‌ಐಟಿಕೆ ಸೂರತ್ಕಲ್ ಪ್ರಾದ್ಯಾಪಕರಾದ ಡಾ.ಆಲ್ವಿನ್ ಪೆಯಸ್, ಹೈದರಾಬಾದ್ ಐಐಟಿ ಪ್ರಾದ್ಯಾಪಕರಾದ ಡಾ.ಅಶೋಕ್ ಕುಮಾರ್ ದಾಸ್, ಐಐಟಿ ಬೆಂಗಳೂರಿನ ಡಾ.ರೋಲಾಂಡ್ ಎರಿಕ್, ಐಐಟಿ ಧಾರವಾಡದ ಡಾ.ಎಸ್.ಆರ್. ಮಹದೇವ ಪ್ರಸನ್ನ, ಐಐಟಿ ಹೈದರಾಬಾದ್‌ನ ಡಾ.ಕಣ್ಣನ್ ಶ್ರೀನಾಥ, ತುಮಕೂರು ಎಸ್.ಐ.ಟಿ ಕಾಲೇಜಿನ ಡಾ.ಎನ್.ಆರ್.ಸುನಿತಾ, ಎನ್.ಐ.ಟಿ ಗೋವಾದ ಡಾ.ಪುರಶೋತ್ತಮ.ಬಿ.ಆರ್, ವೈಜ್ಞಾನಿಕ ಸಲಹೆಗಾರ ಡಾ.ಪಿ.ಕೆ. ಸಕ್ಸೆನಾ, ದೆಹಲಿಯ ಡಿಆರ್‌ಡಿಒ ವೈಜ್ಞಾನಿಕ ವಿಶ್ಲೇಷಣಾ ತಂಡದ ಸದಸ್ಯರಾದ ಡಾ.ಇಂಧೀವರ್ ಗುಪ್ತ, ಕ್ರಿಪ್ಟಾಲಜಿ ರಿಸರ್ಚ್ ಸೊಸೈಟಿ ಆಫ್ ಇಂಡಿಯಾ ಅಧ್ಯಕ್ಷರಾದ ಡಾ.ಆರ್.ಬಾಲಸುಬ್ರಮಣಿಯನ್, ಮೈಸೂರು ವಿವಿಸಿಇ ಕಾಲೇಜಿನ ಡಾ.ಗುರುರಾಜ್.ಹೆಚ್.ಎಲ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post