ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಜ್ಯದ ಇತಿಹಾಸದಲ್ಲಿಯೇ ಪವಿತ್ರವಾದ ಸಭಾಪತಿ ಪೀಠಕ್ಕೆ ಅಗೌರವವಾಗಿದೆ ಎಂದು ರಾಷ್ಟ್ರಭಕ್ತ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ #K S Eshwarappa ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಾಜಿ ಮಂತ್ರಿ ಸಿ.ಟಿ. ರವಿರವರ #C T Ravi ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಗೂಂಡಾ ವರ್ತನೆ ತೋರಿದ್ದಾರೆ. ರಾತ್ರೋರಾತ್ರಿಯೇ ಬಂಧಿಸಿ 5 ಜಿಲ್ಲೆಗಳಲ್ಲಿ ಸುತ್ತಿಸಿದ್ದಾರೆ, ಗಾಯ ಮಾಡಿದ್ದಾರೆ, ಇದೇನು ಪೊಲೀಸ್ ಗುಂಡಾ ರಾಜ್ಯವೇ ಇದೇ ಮೊದಲ ಬಾರಿಗೆ ಸಭಾಪತಿ ಪೀಠಕ್ಕೆ ಅವಮಾನ ಮಾಡಲಾಗಿದೆ. ಸದನದ ಒಳಗೆ ಏನೇ ನಡೆದರೂ ಅಥವಾ ಯಾರನ್ನೂ ಬಂಧಿಸಬೇಕಾದರೂ ಸಭಾಪತಿಗಳ ಒಪ್ಪಿಗೆ ಬೇಕಾಗುತ್ತದೆ. ಅವರ ಗಮನಕ್ಕೆ ಬಾರದೆ ಈ ರೀತಿ ಸಿ.ಟಿ. ರವಿಯವರನ್ನು ಬಂಧಿಸಿರುವುದು ಖಂಡನೀಯ ಎಂದರು.
ಸಭಾಪತಿ ಹೊರಟ್ಟಿಯವರು ಮತ್ತು ಸರ್ಕಾರ ಈ ಬಗ್ಗೆ ಸ್ಪಷ್ಟನೇ ನೀಡಬೇಕಾಗಿದೆ. ಅವರು ತಮ್ಮ ಜವಬ್ದಾರಿಯಿಂದ ನಿರ್ವಹಿಸಬೇಕು, ಹೀಗೆ ಗೂಂಡಾ ವರ್ತನೆ ತೋರಿಸಿರುವುದು ಸರಿಯಲ್ಲ. ಈ ಬಗ್ಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಗೃಹಮಂತ್ರಿ, ತಮಗೆ ಮನಸ್ಸಿಗೆ ಬಂದಿದ್ದನ್ನು ಹೇಳುತ್ತಿದ್ದಾರೆ. ಹೈಕೋರ್ಟ್ ಈಗಾಗಲೇ ಸರ್ಕಾರಕ್ಕೆ ರವಿಯವರಿಗೆ ಮಧ್ಯಂತರ ಜಾಮೀನು ನೀಡುವ ಮೂಲಕ ಕಪಾಳ ಮೋಕ್ಷಾ ಮಾಡಿದೆ ಎಂದರು.
Also read: ಈ ಕಾರಣಕ್ಕಾಗಿ ರವಿಯನ್ನು ಪೊಲೀಸರು ರಾತ್ರಿಯಿಡೀ ಸುತ್ತಾಡಿಸಿರಬಹುದು | ಆಯನೂರು ಮಂಜುನಾಥ್ ಹೇಳಿದ್ದೇನು?
ಇಡೀ ರಾಜ್ಯದಲ್ಲಿ ಪೊಲೀಸರು ಸರ್ಕಾರದ ಗುಲಾಮರಂತೆ ವರ್ತಿಸುತ್ತಿದ್ದಾರೆ. ಆಡಳಿತ ಸರ್ಕಾರದ ಕೈಗೊಂಬೆಯಂತೆ ನಡೆದುಕೊಳ್ಳುತ್ತಿದ್ದಾರೆ. ಇದು ಶಿವಮೊಗ್ಗದಲ್ಲೂ ಕೂಡ ಮುಂದುವರೆದಿದೆ. ರಾಷ್ಟ್ರಭಕ್ತ ಬಳಗದ ವಿಶ್ವಾಸ್ ಎಂಬುವವರು ರೈಲ್ವೆ ಬ್ರಿಡ್ಜ್ ಹತ್ತಿರ ಅನ್ಯಾಯವನ್ನು ಖಂಡಿಸಿ ಪ್ರತಿಭಟನೆ ಮಾಡುತ್ತಿದ್ದರೆ ಅವರ ವಿರುದ್ಧ ಕೇಸ್ ಹಾಕಲಾಗಿದೆ. ಇದು ಯಾವ ನ್ಯಾಯ, ಈ ಹಿಂದೆ ನನ್ನ ಬಗ್ಗೆಯೂ ಎರಡು ಬಾರಿ ಕೇಸ್ ಹಾಕಲಾಗಿದೆ. ಬಾಂಗ್ಲಾ ದೇಶದ ಮುಸ್ಲಿಂರಿಗೆ ಬೈದರೆ ಶಿವಮೊಗ್ಗದ ಎಸ್’ಪಿಯವರಿಗೆ ಏಕೆ ಸಿಟ್ಟು, ಅವರೇಕೆ ಸರ್ಕಾರದ ಗುಲಾಮರಂತೆ ವರ್ತಿಸುತ್ತಿದ್ದಾರೆ. ಅವರ ಹಿಂದೆ ಯಾವ ರಾಜಕಾರಣಿಗಳಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿ.ಟಿ.ರವಿ ಬಂಧನ ಮತ್ತು ಅನಂತರ ಅವರನ್ನು ನಡೆಸಿಕೊಂಡ ರೀತಿ ಬಗ್ಗೆ ಮತ್ತು ಆಕಸ್ಮಾತ್ ಸಿ.ಟಿ.ರವಿಯವರು ಸಚಿವೆ ಲಕ್ಷ್ಮೀಹೆಬ್ಬಾಳಕರ್‍ರವರಿಗೆ #Lakshmi Hebbalkar ಅವಾಚ್ಯ ಶಬ್ಧ ಪ್ರಯೋಗಿಸಿದ್ದರೆ ಈ ಎರಡು ಘಟನೆಗಳನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎಂ.ಜೆ.ಬಾಲು, ಶ್ರೀಕಾಂತ್, ರಾಜು, ಕಾಚಿನಕಟ್ಟೆ ಸತ್ಯಾನಾರಾಯಣ, ಮೋಹನ್‍ರಾವ್ ಜಾಧವ್, ಟಾಕ್ಯಾನಾಯಕ, ಶಿವಾಜಿ ಸೇರಿದಂತೆ ಹಲವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post