ದಿನನಿತ್ಯದ ಸಾಮಾಜಿಕ ಜೀವನದಲ್ಲಿ ಅತ್ಯಮೂಲ್ಯವಾದ ವಸ್ತುಗಳ ಬಳಕೆಗೆ ಅದರ ಗುಣಮಟ್ಟ ವಿಶ್ಲೇಷಣೆ ಮಾಡುವುದು ಸಾಮಾಜಿಕ ಸ್ತರದಲ್ಲಿ ಅತ್ಯವಶ್ಯಕವಾಗಿದೆ ಎಂದು ಹುಬ್ಬಳ್ಳಿ ವಿಭಾಗದ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ ಸಂಸ್ಥೆಯ ಪ್ರಚಾರ ಅಧಿಕಾರಿಎಂ. ಅಹಮದ್ ಬಿಜಾಪುರ್ ತಿಳಿಸಿದರು.
ಪಿಇಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್ಮೆಂಟ್ PESITM ಕಾಲೇಜಿನಲ್ಲಿ ಮೆಕ್ಯಾನಿಕಲ್ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ ಕ್ಲಬ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಗುಣಮಟ್ಟವುಳ್ಳ ವಸ್ತುಗಳನ್ನು ಬಳಸುವಲ್ಲಿ ಅತ್ಯವಶ್ಯವಿರುವ ಪರಿಶೀಲನ ವೈಖರಿಯನ್ನು ಅರ್ಥಮಾಡಿಕೊಳ್ಳುವುದು ಹಾಗೂ ಪ್ರಾಯೋಗಿಕವಾಗಿ ಬಳಸುವುದು ಬಹುಮುಖ್ಯವಾಗಿದೆ ಎಂದು ಉಪಸ್ಥಿತರಿದ್ದ ವಿದ್ಯಾರ್ಥಿ ಸಮೂಹಕ್ಕೆ ಮನಮುಟ್ಟುವಂತೆ ತಿಳಿಸಿದರು

ಹುಬ್ಬಳ್ಳಿ ವಿಭಾಗದ ಬ್ಯುರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ ಸಂಸ್ಥೆಯ ಅಸಿಸ್ಟೆಂಟ್ ಡೈರೆಕ್ಟರ್ ಮರ್ಸಿ ರಾಣಿ ಮಾತನಾಡಿ, ಗುಣಮಟ್ಟವೆಂಬುದು ಮಾನವ ಸಮಾಜದ ಅವಿಭಾಜ್ಯ ಅಂಗವಾಗಿ ನಿರ್ಮಿತವಾಗಬೇಕು ಹಾಗೂ ರಾಷ್ಟ್ರೀಯ ಮತ್ತು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಅಸಾಧಾರಣ ಉತ್ಕೃಷ್ಟತೆಯನ್ನು ಪಡೆದಿರುವ ವಸ್ತುಗಳನ್ನು ದೈನಂದಿನ ಚಟುವಟಿಕೆಗಳಲ್ಲಿ ಉಪಯೋಗಿಸುವಲ್ಲಿ ಸಹಕಾರಿಯಾಗುವಂತೆ ಈ ಸಂಸ್ಥೆಯು ಸದಾಕಾಲ ಕಾರ್ಯನಿರ್ವಹಿಸುತ್ತದೆ ಎಂದು ಸಂಸ್ಥೆಯ ಧ್ಯೇಯೋದ್ದೇಶಗಳ ಬಗ್ಗೆ ಪಕ್ಷಿ ನೋಟ ವಿವರಣೆಯನ್ನು ಸಭಿಕರಿಗೆ ನೀಡಿದರು.

Also read: On the auspicious occasion of Janmashtami, Shah visited Delhi’s ISKCON temple
ದೈನಂದಿನ ಚಟುವಟಿಕೆಗಳಲ್ಲಿ ತಾವು ಬಳಸುವ ಎಲ್ಲಾ ವಸ್ತುಗಳ ಗುಣಮಟ್ಟ ಹಾಗೂ ಅವುಗಳನ್ನು ಬಳಸುವ ರೀತಿಯ ಬಗ್ಗೆ ವೈಜ್ಞಾನಿಕವಾಗಿ ಮಾಹಿತಿಯನ್ನು ಪಡೆದುಕೊಳ್ಳುವುದು ಅತ್ಯವಶ್ಯಕವಾಗಿದೆ ಎಂದು ನುಡಿದರು. ಈ ಮೂಲಕ ತಾವು ಉಪಯೋಗಿಸುವ ವಸ್ತುಗಳ ಅವೈಜ್ಞಾನಿಕ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆಯೂ ತಿಳಿದುಕೊಂಡಿರಬೇಕಾಗಿರುವುದು ಅತ್ಯವಶ್ಯಕವಾಗಿದೆ ಎಂದರು.



ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post