ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ : ಜೆಸಿಐ ಶಿವಮೊಗ್ಗ ಶರಾವತಿ ಘಟಕದಿಂದ ಜೆಸಿಐ ಸಪ್ತಾಹದ ಅಂಗವಾಗಿ ಅತಿಥಿ ಗೃಹದಲ್ಲಿ ಹಮ್ಮಿಕೊಳ್ಳಲಾಗಿದ್ದ ಪೊಲಿಟಿಕಲ್ ಸೆಲಿಬ್ರಿಟಿ ಮೆಂಬರ್ ಹಾಗೂ ನ್ಯೂ ಮೆಂಬರ್ ಆಹ್ವಾನಿಸುವ ಕಾರ್ಯಕ್ರಮದಲ್ಲಿ ಜೆಡಿಎಸ್ ರಾಜ್ಯಪ್ರಧಾನ ಕಾರ್ಯದರ್ಶಿಯಾಗಿರುವ ಎಂ.ಶ್ರೀಕಾಂತ್ ರವರಿಗೆ ಪೊಲಿಟಿಕಲ್ ಸೆಲಿಬ್ರಟಿ ಮೆಂಬರ್ ಹಾಗೂ ಕಾರ್ಪೋರೆಟ್ ಟ್ರೈನರ್ ಆಗಿರುವ ರಾಮಪ್ರಸಾದ್ ಅವರಿಗೆ ನ್ಯೂ ಮೆಂಬರ್ ಆಗಿ ಆಹ್ವಾನಿಸಿ ಜೆಸಿಐ ಪಿನ್ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಜೆಸಿಐ ಶಿವಮೊಗ್ಗ ಶರಾವತಿ ಘಟಕದ ಅಧ್ಯಕ್ಷರಾದ ಜೆಸಿಹೆಚ್ ಜಿಎಫ್ ಮೋಹನ್ ಕಲ್ಪತರು, ಸ್ಥಾಪಕ ಅಧ್ಯಕ್ಷರಾದ ಜೆಸಿ ಜ್ಯೋತಿ ಅರಳಪ್ಪ, ಐಪಿಪಿ ಜೆಸಿ ಗಾರಾ.ಶ್ರೀನಿವಾಸ್, ಕಾರ್ಯದರ್ಶಿ ಜೆಸಿ ಮಮತಾ ಶಿವಣ್ಣ ಉಪಸ್ಥಿತರಿದ್ದರು. ಹಾಗೂ ಘಟಕದ ಎಲ್ಲಾ ಜೆಸಿ ಸದಸ್ಯರುಗಳು ಸಲಹಾ ಮುಖ್ಯಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post