ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಹಿರಿಯ ಪತ್ರಕರ್ತ, ಲೇಖಕ ಗೋಪಾಲ್ ಯಡಗೆರೆ ಅವರನ್ನು ಮಾಧ್ಯಮ ಅಕಾಡೆಮಿ ಸದಸ್ಯರನ್ನಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಹಿರಿಯ ಪತ್ರಕರ್ತ ಸದಾಶಿವ ಶೆಣೈ ಅವರು ಅಧ್ಯಕ್ಷರಾಗಿರುವ ಈ ಸಮಿತಿಗೆ ಒಟ್ಟು ನಾಲ್ಕು ಸದಸ್ಯರನ್ನು ಸರ್ಕಾರ ನಾಮ ನಿರ್ದೇಶನಗೊಳಿಸಿದೆ.
ಕಳೆದ 33 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿರುವ ಹಿರಿಯ ಪತ್ರಕರ್ತ ಗೋಪಾಲ್ ಯಡಗೆರೆಯವರು ಉದಯವಾಣಿ ಪತ್ರಿಕೆಯಲ್ಲಿ ಸುದೀರ್ಘ ಅವಧಿಗೆ ಸೇವೆ ಸಲ್ಲಿಸಿದ್ದು, ಬಳಿಕ ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಧಾನ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪತ್ರಿಕೋದ್ಯಮದಲ್ಲಿ ಪರಿಸರ, ತನಿಖಾ ವರದಿಗಳು, ರಾಜಕೀಯ ವರದಿಗಳಲ್ಲಿ ಹೆಸರು ಮಾಡಿದ್ದಾರೆ. ಸಾವಿರಾರು ಜನಪರ ಕಾಳಜಿಯುಳ್ಳ ಲೇಖನಗಳನ್ನು ಬರೆದಿದ್ದಾರೆ.
ಪರಿಚಯ:
ಮೂಲತಃ ಎನ್. ಆರ್. ಪುರ ತಾಲೂಕಿನ ಯಡಗೆರೆಯವರಾದ ಇವರು ಶೃಂಗೇರಿಯ ಜೆಸಿಬಿಎಂ ಕಾಲೇಜಿನಲ್ಲಿ ಪದವಿ ಪಡೆದು ಬಳಿಕ ಪತ್ರಿಕೋದ್ಯಮಕ್ಕೆ ತೊಡಗಿಸಿಕೊಂಡರು. ತರಂಗ, ರೂಪತಾರಾ, ತುಷಾರ ಪತ್ರಿಕೆಗಳಲ್ಲಿ ಸಾಕಷ್ಟು ಮುಖಪುಟ ಲೇಖನಗಳನ್ನು ಬರೆದಿದ್ದು, ನಾಡಿನಾದ್ಯಂತ ಹೆಸರು ಮಾಡಿದ್ದಾರೆ.
ಪತ್ರಿಕೋದ್ಯಮದ ಜೊತೆಗೆ ಸಾಹಿತ್ಯ, ಕೃಷಿಯಲ್ಲಿಯೂ ತೊಡಗಿಸಿಕೊಂಡಿದ್ದು, ನಾನಾಗದ ನಾನು ಕವನ ಸಂಕಲ, ಸೋಲನ್ನು ಸೋಲಿಸು ಮತ್ತು ಮಿಸ್ಡ್ ಕಾಲ ಕೃತಿಗಳನ್ನು ಹೊರ ತಂದಿದ್ದಾರೆ. ಸೋಲನ್ನು ಸೋಲಿಸು ಕೃತಿಗೆ ರಾಜ್ಯಮಟ್ಟದ ಸಾಹಿತ್ಯ ಪ್ರಶಸ್ತಿ ಸಿಕ್ಕಿದೆ .
ಪ್ರಶಸ್ತಿಗಳು:
ಮಾನವೀಯ ವರದಿಗಾಗಿ ಭೂಪಾಳಂ ಚಂದ್ರಶೇಖರ ಪ್ರಶಸ್ತಿ, ಗುರುಸಿದ್ದಶ್ರೀ ಪ್ರಶಸ್ತಿ, ವಿಪ್ರಧ್ವನಿ-ಯಶಸ್ವಿನಿ ಕಲಾಸಾಹಿತ್ಯ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು, ಸನ್ಮಾನಗಳು ಇವರನ್ನು ಹುಡುಕಿಕೊಂಡು ಬಂದಿದೆ.
ಸಂಘ ಸಂಸ್ಥೆಗಳಲ್ಲಿನ ಕಾರ್ಯನಿರ್ವಹಣೆ;
ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕರಾಗಿ, ಉಪಾಧ್ಯಕ್ಷರಾಗಿ, ರಾಷ್ಟ್ರೀಯ ಸಮಿತಿ ಸದಸ್ಯರಾಗಿ, ಪ್ರೆಸ್‍ಟ್ರಸ್ಟ್ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಣೆ. ಪ್ರೆಸ್‍ಗಿಲ್ಡ್ ಪ್ರಧಾನಕಾರ್ಯದರ್ಶಿಯಾಗಿ, ಪ್ರೆಸ್‍ಕ್ಲಬ್ ನಿರ್ದೇಶಕರಾಗಿ ಕಾರ್ಯನಿರ್ವಹಣೆ.
ಕಲ್ಪ ಮೀಡಿಯ ಹೌಸ್ ನ ಮುಖ್ಯ ಸಂಪಾದಕ ಅನಿರುದ್ಧ ವಸಿಷ್ಠ , ಪ್ರಧಾನ ಸಲಹಾ ಸಂಪಾದಕ ಡಾ.ಸುಧೀಂದ್ರ ಅವರು, ಗೋಪಾಲ್ ಯಡಗೆರೆ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post