ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪತ್ರಕರ್ತ ಕೃಷ್ಣ ಬನಾರಿ ಅವರ ತಂದೆ ಎಸ್. ನಾರಾಯಣ ಭಟ್(77) ಅವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ರಾಮನಗರದ ಸ್ವಗೃಹದಲ್ಲಿ ಅಲ್ಪ ಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಅಡುಗೆ ವೃತ್ತಿಯಲ್ಲಿ ಪ್ರಸಿದ್ಧರಾಗಿದ್ದ ನಾರಾಯಣ ಭಟ್ ಅವರು, 100ಕ್ಕೂ ಹೆಚ್ಚು ಜನರಿಗೆ ಅಡುಗೆ ತರಬೇತಿ, ಸಾವಿರಾರು ಮನೆಗಳ ಶುಭ ಕಾರ್ಯಕ್ರಮಗಳಿಗೆ ಖಾಯಂ ಅಡುಗೆ ತಯಾರಿಯ ನೇತೃತ್ವ ವಹಿಸಿದ್ದರು. ಯಕ್ಷಗಾನ – ತಾಳಮದ್ದಳೆ ಕಲಾ ಪೋಷಕರೂ ಆಗಿದ್ದರು. ವೃತ್ತಿ ನೈಪುಣ್ಯತೆಗಾಗಿ ಪ್ರತಿಷ್ಠಿತ ಸಂಘ ಸಂಸ್ಥೆಗಳಿಂದ ಸನ್ಮಾನಿತರಾಗಿದ್ದರು.
ಮೃತರು ಪತ್ನಿ ಲೀಲಾವತಿ, ಪುತ್ರ ಪತ್ರಕರ್ತ ಕೃಷ್ಣ ಬನಾರಿ, ಪುತ್ರಿಯರಾದ ಸಂಧ್ಯಾ ರಾಣಿ, ಉಷಾ ತಿರುಮಲೇಶ್ವರ ಭಟ್ ಹಾಗೂ ಬಂಧು ಬಳಗ ಮತ್ತು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post