No Result
View All Result
Indriya - Krithi Shetty - Brand Ambassador
English Articles

Indriya announces Krithi Shetty as Brand Ambassador for Southern Markets

by kalpa News
August 14, 2026
0

Kalpa Media House  |  Bengaluru  | Indriya, Aditya Birla Jewellery, announced actor Krithi Shetty as its Brand Ambassador, ahead of...

Read moreDetails
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
Olectra Deploys 4,000 Electric Buses in India Milestone

Olectra Creates History | First Company in India to Deploy 4,000 Electric Buses

July 31, 2026
  • Advertise With Us
  • Grievances
  • About Us
  • Contact Us
Sunday, August 16, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

ಜುಲೈ 21 | ಕಾರ್ಗಿಲ್ ವಿಜಯ | ರೇಡಿಯೋ ಶಿವಮೊಗ್ಗದಲ್ಲಿ ದಾಖಲೆಯ 12 ಗಂಟೆಗಳ ಲೈವ್

kalpa News by kalpa News
July 20, 2024
in ಶಿವಮೊಗ್ಗ
0
ಜುಲೈ 21 | ಕಾರ್ಗಿಲ್ ವಿಜಯ | ರೇಡಿಯೋ ಶಿವಮೊಗ್ಗದಲ್ಲಿ ದಾಖಲೆಯ 12 ಗಂಟೆಗಳ ಲೈವ್
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  |

ಅದು 1999ರ ಜುಲೈ 26 ಭಾರತೀಯರ ಹೆಮ್ಮೆಯ ದಿವಸ. ಅಂದು ಹೆಮ್ಮೆಯ ಭಾರತೀಯ ಸೇನೆಯು ಪಾಕಿಸ್ಥಾನೀ ಸೈನಿಕರನ್ನು ಕಾರ್ಗಿಲ್ ಪ್ರದೇಶದಿಂದ ಹಿಮ್ಮೆಟ್ಟಿಸಿ, ಭಾರತದ ಧ್ವಜವನ್ನು ಹಾರಾಡಿಸಿದ ಮಹತ್ವದ ದಿನ. ಹೀಗಾಗೀ ಜುಲೈ 26ನ್ನು ಕಾರ್ಗಿಲ್ ವಿಜಯ ದಿವಸವನ್ನಾಗಿ #Kargil Vijayadiwas ದೇಶವೇ ಹೆಮ್ಮೆಯಿಂದ ಆಚರಿಸುತ್ತಾ ಇದೆ. ಈ ಬಾರಿ ಈ ಸಂಭ್ರಮಕ್ಕೆ 25 ವರ್ಷ. ಈ ರಜತ ಸಂಭ್ರಮಕ್ಕೆ ಈಗ ರೇಡಿಯೋ ಶಿವಮೊಗ್ಗ ಜೊತೆಯಾಗುತ್ತಿದೆ.

12 ಗಂಟೆಗಳ ನಿರಂತರ ಲೈವ್
ಕಾರ್ಗಿಲ್ ವಿಜಯ ದಿವಸದ ಹಿನ್ನೆಲೆಯಲ್ಲಿ ಜುಲೈ 21ರ ಭಾನುವಾರ ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ದಾಖಲೆಯ ಲೈವ್ ಕಾರ್ಯಕ್ರಮ ನಮ್ಮ ರೇಡಿಯೋ ಶಿವಮೊಗ್ಗದಲ್ಲಿ ಪ್ರಸಾರವಾಗಲಿದೆ. ಭಾರತೀಯ ಸೇನೆಯ ಸಾಧನೆಯನ್ನು ಸ್ಮರಿಸಿಕೊಂಡು, ನಮ್ಮ ಸೇನೆಯ ಬಗ್ಗೆ ಮತ್ತೆ ಮತ್ತೆ ಹೆಮ್ಮೆ ಪಡುವ ಕ್ಷಣಗಳು ಇವಾಗಲಿವೆ.
ಕಾರ್ಗಿಲ್ ಹುತಾತ್ಮ ವಿಕ್ರಮ್ ಬಾತ್ರಾ ರಣಭೂಮಿಯಲ್ಲಿ ನೀಡಿದ ಉದ್ಘೋಷ ಯೇ ದಿಲ್ ಮಾಂಗೇ ಮೋರ್. ಇದು ಆನಂತರ ಬಹಳ ಜನಪ್ರಿಯ ಘೋಷಣೆ ಆಯಿತು.ಈಗ ಪರಿಸರ ಅಧ್ಯಯನ ಕೇಂದ್ರ, ಕೊಡಚಾದ್ರಿ ಇಂಟಿಗ್ರೇಟೆಡ್ ಡೆವೆಲೆಪ್ ಮೆಂಟ್ ಸೊಸೈಟಿ (ಕಿಡ್ಸ್) ಹಾಗೂ ರೇಡಿಯೋ ಶಿವಮೊಗ್ಗ #Radio Shivamogga ವಿಶೇಷ ನೇರ ಪ್ರಸಾರ ಕಾರ್ಯಕ್ರಮ ಯೇ ದಿಲ್ ಮಾಂಗೇ ಮೋರ್ ರೂಪಿಸಿದೆ.

ಈ ನೇರಪ್ರಸಾರವನ್ನು ಸಾಂದೀಪನಿ ಶಾಲೆಯ ಶಿಕ್ಷಕ, ರಂಗಕರ್ಮಿ, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಮಲ್ನಾಡ್ ಓಪನ್ ಗ್ರೂಪ್ ನ ಸ್ಕೌಟ್ ಮಾಸ್ಟರ್ ಚೇತನ್ ಸಿ ರಾಯನಹಳ್ಳಿ ಹಾಗೂ ರಂಗಕರ್ಮಿ, ರೇಡಿಯೋ ಶಿವಮೊಗ್ಗದ ಕಾರ್ಯಕ್ರಮ ಸಂಯೋಜಕ ಕೆ.ವಿ. ಅಜೇಯ ಸಿಂಹ ನಡೆಸಿಕೊಡಲಿದ್ದಾರೆ. ಇದರಲ್ಲಿ ಭಾರತೀಯ ಸೇನೆ, ಕಾರ್ಗಿಲ್ ಯುದ್ಧ, ಯುದ್ಧ ನೀತಿಗಳು, ವೀರಯೋಧರ ಕುರಿತಾಗಿ ಮಾತುಗಳು, ವೀರ ಯೋಧರೊಂದಿಗೆ ಸಂವಾದ ಹಾಗೂ ದೇಶಭಕ್ತಿ ಗೀತೆಗಳು, ಚಲನಚಿತ್ರದ ಹಾಡುಗಳು ಇರುತ್ತವೆ. ಇದರ ಜೊತೆಗೆ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದ ವೀರ ಯೋಧರ ಮಾತುಗಳನ್ನೂ ಕೇಳಲಿದ್ದೀರಿ.
ದಾಖಲೆಯ ಕಾರ್ಯಕ್ರಮ
ಕಾರ್ಗಿಲ್ ವಿಜಯ ದಿವಸದ ಸಂಭ್ರಮಕ್ಕೆ ದೇಶದಾದ್ಯಂತ ಹಲವಾರು ಕಾರ್ಯಕ್ರಮಗಳು ರೂಪುಗೊಳ್ಳುತ್ತಿವೆ. ಇದಕ್ಕೆ ಈ ವಿಶೇಷ ಕಾರ್ಯಕ್ರಮ ಮಹತ್ವದ ಸೇರ್ಪಡೆಯಾಗಿದೆ. ಹೀಗಾಗಿ ಬಾನುಲಿ ಲೋಕದಲ್ಲೇ ಪ್ರಥಮ ಬಾರಿಗೆ ಕಾರ್ಗಿಲ್ ವಿಜಯ ದಿವಸದ ಕುರಿತಾಗಿ ನಿರಂತರ 12 ಗಂಟೆಗಳ ನೇರಪ್ರಸಾರದ ವಿಶಿಷ್ಟ, ವಿಭಿನ್ನ ದಾಖಲೆಯ ಸಾಹಸವನ್ನು ರೇಡಿಯೋ ಶಿವಮೊಗ್ಗ ಮಾಡುತ್ತಿದೆ.

Also read: ಸಾಗರ | ತೀವ್ರ ಜ್ವರದಿಂದ ಬಾಲಕ ಸಾವು | ಡೆಂಗ್ಯೂ ಶಂಕೆ

ಸಮಸ್ತ ದೇಶವಾಸಿಗಳೂ ಎದೆತಟ್ಟಿಕೊಂಡು, ಬೀಗುವ ಸಮಯವಿದು. ಗಡಿಯನ್ನು ರಕ್ಷಿಸುತ್ತಾ, ತಮ್ಮ ಕುಟುಂಬ, ಮನೆಯನ್ನು ಮರೆತು ದೇಶಸೇವೆಯಲ್ಲಿ ನಿರತರಾಗಿರುವ ಆ ಎಲ್ಲ ವೀರಯೋಧರನ್ನು ಶ್ಲಾಘಿಸುವ ಸಮಯವಿದು. ಸೇನೆಯಲ್ಲಿದ್ದು, ವೀರಸ್ವರ್ಗವನ್ನು ಸೇರಿದ ನಮ್ಮ ಯೋಧರನ್ನು ಸ್ಮರಿಸುತ್ತಾ, ಅವರ ಕುಟುಂಬದವರ ತ್ಯಾಗವನ್ನು ಕೊಂಡಾಡುವ ಘಳಿಗೆ ಇದು. ದೇಶಸೇವೆಗೆಂದು ತಮ್ಮ ಬದುಕನ್ನು ಮೀಸಲಿಟ್ಟಿರುವ ಎಲ್ಲ ಸೈನಿಕರ ಕುರಿತಾದ ಈ ಕಾರ್ಯಕ್ರಮಕ್ಕೆಂದು ಜುಲೈ 21ರ ಭಾನುವಾರ ಸಾಕ್ಷಿಯಾಗೋಣ. ನಮ್ಮ ದಿನವನ್ನೂ ಮೀಸಲಿಡೋಣ. ಈ ಕಾರ್ಯಕ್ರಮಕ್ಕೆ ತಾವೂ ಕರೆ ಮಾಡಿ ಮಾತನಾಡಬಹುದು. ತಾವು (ಮೊ: 96 860 96 279)ಗೆ ಕರೆ ಮಾಡಬಹುದು.

ರೇಡಿಯೋ ಶಿವಮೊಗ್ಗ ಆಪ್ ಪ್ಲೇ ಸ್ಟೋರ್ ಹಾಗೂ ಆಪಲ್ ಸ್ಟೋರ್ ಗಳಲ್ಲಿ ಲಭ್ಯವಿದ್ದು, ಇದನ್ನು ಡೌನ್ ಲೋಡ್ ಮಾಡಿಕೊಂಡು ದಿನದ 24 ಗಂಟೆಯೂ ಪ್ರಸಾರವಾಗುವ ಎಲ್ಲ ಕಾರ್ಯಕ್ರಮಗಳನ್ನು ಆಲಿಸಬಹುದೆಂದು ನಿಲಯ ನಿರ್ದೇಶಕ ಜಿ.ಎಲ್. ಜನಾರ್ದನ್ ಕೋರಿರುತ್ತಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news      

Tags: Kannada_NewsKannada_News_LiveKannada_News_Online ShivamoggaKannada_WebsiteKannadaNewsWebsiteKargil VijayadiwasLatestNewsKannadaLocalNewsMalnadNewsNews_in_KannadaNews_KannadaRadio ShivamoggaShimogaShivamoggaNewsಕಾರ್ಗಿಲ್ ವಿಜಯ ದಿವಸಮಲೆನಾಡು_ಸುದ್ಧಿರೇಡಿಯೋ ಶಿವಮೊಗ್ಗಶಿವಮೊಗ್ಗಶಿವಮೊಗ್ಗ_ನ್ಯೂಸ್
Share237Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಸಾಗರ | ತೀವ್ರ ಜ್ವರದಿಂದ ಬಾಲಕ ಸಾವು | ಡೆಂಗ್ಯೂ ಶಂಕೆ

Next Post

ಶಿವಮೊಗ್ಗ | ನಗರದಲ್ಲಿ ಬಲಿಗಾಗಿ ಕಾದಿವೆ ಗುಂಡಿಗಳು | ಅಪಾಯಕ್ಕೂ ಮುನ್ನ ಎಚ್ಚೆತ್ತುಕೊಳ್ಳುವುದೇ ಪಾಲಿಕೆ?

kalpa News

kalpa News

Next Post
ಶಿವಮೊಗ್ಗ | ನಗರದಲ್ಲಿ ಬಲಿಗಾಗಿ ಕಾದಿವೆ ಗುಂಡಿಗಳು | ಅಪಾಯಕ್ಕೂ ಮುನ್ನ ಎಚ್ಚೆತ್ತುಕೊಳ್ಳುವುದೇ ಪಾಲಿಕೆ?

ಶಿವಮೊಗ್ಗ | ನಗರದಲ್ಲಿ ಬಲಿಗಾಗಿ ಕಾದಿವೆ ಗುಂಡಿಗಳು | ಅಪಾಯಕ್ಕೂ ಮುನ್ನ ಎಚ್ಚೆತ್ತುಕೊಳ್ಳುವುದೇ ಪಾಲಿಕೆ?

Leave a Reply Cancel reply

Your email address will not be published. Required fields are marked *

No Result
View All Result
Indriya - Krithi Shetty - Brand Ambassador
English Articles

Indriya announces Krithi Shetty as Brand Ambassador for Southern Markets

by kalpa News
August 14, 2026
0

Kalpa Media House  |  Bengaluru  | Indriya, Aditya Birla Jewellery, announced actor Krithi Shetty as its Brand Ambassador, ahead of...

Read moreDetails
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
Olectra Deploys 4,000 Electric Buses in India Milestone

Olectra Creates History | First Company in India to Deploy 4,000 Electric Buses

July 31, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL