ಶ್ರೀ ಗುರುಗುಹ ವಾಗ್ಗೇಯ ಪ್ರತಿಷ್ಠಾನ ಟ್ರಸ್ಟ್ ಹಾಗೂ ಶ್ರೀ ಗುರುಗುಹ ಸಂಗೀತ ಭಾರತಿ ಇವರ ಸಂಯುಕ್ತ ಆಶ್ರಯದಲ್ಲಿ ಜು.8ರಿಂದ 10 ರವರೆಗೆ ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಕರ್ನಾಟಕ ಹಾಗೂ ಹಿಂದೂಸ್ತಾನಿ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಜು.8ರಂದು ಸಂಜೆ 6:30ಕ್ಕೆ ಶಿವಮೊಗ್ಗೆಯ ಸಾಂಸ್ಕøತಿಕ ರಾಯಭಾರಿ ಕೀರ್ತಿಶೇಷ ಎಂ. ಭಾರದ್ವಾಜ್ ಸಂಸ್ಮರಣಾ ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ಮೈಸೂರಿನ ಎಂ.ಆರ್. ಸುಧಾ ಅವರಿಂದ ಹಾಡುಗಾರಿಕೆ, ಹೊಸಳ್ಳಿ ವಿ.ರಘುರಾಮ್‍ರಿಂದ ವಯೊಲಿನ್ ಹಾಗೂ ಬೆಂಗಳೂರಿನ ಸಿ. ಚೆಲುವರಾಜ್‍ರಿಂದ ಮೃದಂಗವಿದೆ.
ಜು.9ರಂದು ಬೆಳಿಗ್ಗೆ 11 ಗಂಟೆಗೆ 2022ರ ಆಗಸ್ಟ್ 7ರಿಂದ ಆರು ತಿಂಗಳ ಕಾಲ ಆನ್‍ಲೈನ್ ಮೂಲಕ ಮಹಿಳೆಯರಿಗೆ ನಡೆಸಿದ ಭಕ್ತಿ ಸಂಕೀರ್ತನದ ಉಚಿತ ಶಿಕ್ಷಣ ಅಭಿಯಾನದ ಸಮಾರೋಪ ಸಮಾರಂಭ ನಡೆಯಲಿದ್ದು, ಭಾರತೀಯ ವಿದ್ಯಾಭವನದ ಶಿವಮೊಗ್ಗ ಶಾಖೆಯ ಉಪಾಧ್ಯಕ್ಷ ಎಸ್. ದಿವಾಕರ ರಾವ್ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಯಾಗಿ ಮೆಗ್ಗಾನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶ್ರೀಧರ್ ಎಸ್. ಹಾಗೂ ಶ್ರೀ ಶಂಕರನಾರಾಯಣ ಕಾಶಿ ಟ್ರಸ್ಟ್ ಅಧ್ಯಕ್ಷೆ ನಿರ್ಮಲಾ ಕಾಶಿ ಭಾಗವಹಿಸಲಿದ್ದಾರೆ.
Also read: ರಾಜ್ಯ ಬಜೆಟ್‌ನಲ್ಲಿ ಯಾವ ಇಲಾಖೆಗೆ ಎಷ್ಟು ಹಣ ಮೀಸಲಿಡಲಾಗಿದೆ? ಇಲ್ಲಿದೆ ಮಾಹಿತಿ
ಜು.10ರಂದು ಸಂಜೆ 6-30ಕ್ಕೆ ಹಿಂದುಸ್ತಾನಿ ಸಂಗೀತ ಆಯೋಜಕ ಕೀರ್ತಿಶೇಷ ಹರಗೋಪಾಲಭಟ್ ಅವರ ಸಂಸ್ಮರಣಾ ಹಾಗೂ ಹಿಂದೂಸ್ಥಾನಿ ಸಂಗೀತ ಕಾರ್ಯಕ್ರಮ ನಡೆಯಲಿದ್ದು ಸಾಗರದ ವಸುಧಾ ಶರ್ಮ ಅವರಿಂದ ಗಾಯನ, ಶಿವಮೊಗ್ಗದ ವಿನಾಯಕ ಭಟ್‍ರಿಂದ ತಬಲಾ, ಸಾಗರದ ಸಂವತ್ಸರ ಹಾರ್ಮೋನಿಯಂ ನುಡಿಸಲಿದ್ದಾರೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















