ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪಕ್ಷವನ್ನು ಇನ್ನಷ್ಟು ಸಂಘಟಿಸುವ ಸದುದ್ದೇಶದಿಂದ ಹಾಗೂ ಪ್ರತಿಯೊಂದು ಬೂತ್ ಗಳಲ್ಲಿ ಪಕ್ಷವನ್ನು ವಿಜಯದ ಹಾದಿಗೆ ತರುವ ದೃಷ್ಟಿಯಿಂದ ಪಕ್ಷದ ಪ್ರತಿ “ಬೂತ್ ಅಧ್ಯಕ್ಷ” ಹಾಗೂ “ಕಾರ್ಯಕರ್ತರ” ಮನೆಗಳಲ್ಲಿ “ರಾಜ್ಯ ಬಿಜೆಪಿ” ಹಮ್ಮಿಕೊಂಡಿರುವ “ಬೂತ್ ವಿಜಯ” ಕಾರ್ಯಕ್ರಮವನ್ನು ಶಿವಮೊಗ್ಗದ ರವೀಂದ್ರ ನಗರದ ವಾರ್ಡ್ 10 ರಲ್ಲಿ ಬರುವ ಜಯನಗರ ಬಡಾವಣೆಯ ಬೂತ್ ನಂ. 68ರ ಅಧ್ಯಕ್ಷ ಶ್ರೀಮತಿ ಎಸ್.ಆರ್. ಗೀತಾ ಅವರ ನಿವಾಸದಲ್ಲಿ ಪಕ್ಷದ ಧ್ವಜ ನೀಡುವ ಮೂಲಕ ಸೂಡಾ ಮಾಜಿ ಅಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ವಿಭಾಗ ಸಂಘಟನಾ ಕಾರ್ಯದರ್ಶಿ ನಟರಾಜ್, ಮಹಾನಗರ ಪಾಲಿಕೆ ಸದಸ್ಯರಾದ ಆರತಿ, ಮುಖಂಡರಾದ ಪ್ರಕಾಶ್ ಅವರು ಸೇರಿದಂತೆ ಬೂತ್ ಮತ್ತು ವಾರ್ಡ್ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.












Discussion about this post