ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸೂಡಾದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರವನ್ನು ತನಿಖೆ ಮಾಡಬೇಕು ಎಂದು ಮಾಜಿ ಶಾಸಕ ಹಾಗೂ ಜೆ.ಡಿ.ಎಸ್. ಮುಖಂಡ ಕೆ.ಬಿ. ಪ್ರಸನ್ನಕುಮಾರ್ ಆಗ್ರಹಿಸಿದ್ದಾರೆ.
ಸೂರಿಲ್ಲದವರಿಗೆ ಮನೆ, ನಿವೇಶನ ನೀಡುವ ಉದ್ದೇಶದಿಂದ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ. ಕೆ.ಹೆಚ್.ಬಿ. ಸೂಡಾ ಮುಂತಾದ ಸಂಸ್ಥೆಗಳು ಇದರ ಹೊಣೆ ಹೊತ್ತುಕೊಂಡಿವೆ. ಆದರೆ ಇವೆಲ್ಲವೂ ರೀಯಲ್ ಎಸ್ಟೇಟ್ ದಂಧೆಗಳಾಗಿವೆ ಎಂದು ದೂರಿದರು.
ಸೂಡಾದಲ್ಲಿ ಸುಂದರೇಶ್ ಅವರು ಅಧ್ಯಕ್ಷರಾದ ಮೇಲೆ ಸುಮಾರು 13 ಕಾಮಗಾರಿಗಳು ನಡೆದಿವೆ. ಇಲ್ಲಿ ಕೋಟ್ಯಾಂತರ ರೂ. ಅವ್ಯವಹಾರವಾಗಿದೆ ಎಂದು ಈಗಾಗಲೇ ಗುತ್ತಿಗೆದಾರರಾದ ಗುರುಸಾಯಿ ಮತ್ತು ಬಸವರಾಜ್ ಎಂಬುವವರು ಲೋಕಾಯುಕ್ತಕ್ಕೆ ನೀಡಿದ್ದಾರೆ. ಸೂಡಾದ ಅಧಿಕಾರಿಗಳು ಈ ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಅದರಲ್ಲೂ ಜೆ.ಇ. ದಿನೇಶ್ ಎಂಬಾತ ಈ ಅಕ್ರಮಗಳ ಹಿಂದೆ ಪ್ರಮುಖಪಾತ್ರ ವಹಿಸಿಸದ್ದಾನೆ ಎಂದು ತಿಳಿದು ಬಂದಿದೆ ಎಂದು ದೂರಿದರು.
ಇದಕ್ಕೆ ಉದಾಹರಣೆ ಎಂಬಂತೆ ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯಲ್ಲಿ 1441 ಮಿರ‍್ಸ್ ಪಾರ್ಕಿನ ಕಾಮಗಾರಿಗೆ ಕೇವಲ 518 ಮೀಟರ್ ಕಾಮಗಾರಿ ಮಾಡಲಾಗಿದೆ. ಆದರೆ ಪೂರ್ತಿ ಹಣವನ್ನು ಪಾವತಿಸಲಾಗಿದೆ. ಊರುಗಡೂರಿನಲ್ಲಿಯೂ ಅವ್ಯವಹಾರವಾಗಿದೆ. ಇದಲ್ಲದೆ ಕಛೇರಿ ನವೀಕರಣದಲ್ಲೂ ಕೂಡ ಹಣ ದುರುಪಯೋಗವಾಗಿದೆ ಎಂದು ದೂರಿದರು.
ಇಷ್ಟೇಲ್ಲಾ ಕಳಪೆ ಮತ್ತು ಅವೈಜ್ಞಾನಿಕವಾಗಿ ಕಾಮಗಾರಿಗಳು ನಡೆದಿವೆ. ನೂರಾರು ಕೋಟಿ ಹಣ ದುರುಪಯೋಗವಾಗಿದೆ ಎಂದು ಲೋಕಾಯುಕ್ತರೇ ದೂರು ಕೊಟ್ಟಿದ್ದಾರೆ. ಈ ಹಿನ್ನಲೆಯಲ್ಲಿ ಹೊಸ ಜಿಲ್ಲಾಧಿಕಾರಿ ಈ ಎಲ್ಲಾ ಕಾಮಗಾರಿಗಳ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ದೀಪಕ್‌ಸಿಂಗ್, ರಘು, ವೆಂಕಟೇಶ್, ದಯಾನಂದ್, ಹೆಚ್.ಎಂ. ಸಂಗಯ್ಯ, ನರಸಿಂಹ ಗಂಧದ ಮನೆ, ಉಮಾಶಂಕರ ಉಪಾಧ್ಯಾಯ, ಸುನೀಲ್, ಲೋಹಿತ್, ಪ್ರಭಾಕರ್, ನಿಹಾಲ್, ಚಂದ್ರಶೇಖರ್, ಶಂಕರ್ ಮತ್ತಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















