ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕನ್ನಡದಲ್ಲಿ ಜೀವಿಸುವ ಮೂಲಕ ಕನ್ನಡದ ಅಸ್ಮಿತೆ ಉಳಿಸಬೇಕು ಎಂದು ಸಾಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಪಕ ಹಾಗೂ ವಿಮರ್ಶಕ ಡಾ.ಕುಂಸಿ ಉಮೇಶ್ ಹೇಳಿದರು.
ಅವರು ಇಂದು ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಸಹ್ಯಾದ್ರಿ ಕಲಾ ಪರಿಷತ್ ಹಾಗೂ ಕನ್ನಡ ನುಡಿ ಹಬ್ಬದ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಕನ್ನಡವನ್ನು ಉಳಿಸಲು ನಾವು ಏನು ಮಾಡಬೇಕಾಗಿಲ್ಲ. ಕನ್ನಡದಲ್ಲಿ ಜೀವಿಸಿದರೆ ಸಾಕು. ಕನ್ನಡದ ಬಗ್ಗೆ ತಲೀನತೆ, ಆತ್ಮಸಂತೋಷ, ಭಾಷೆಯ ಬಗ್ಗೆ ಪ್ರೀತಿ ಇದ್ದರೆ ಭಾಷೆ ತಾನಾಗಿಯೇ ಉಳಿಯುತ್ತದೆ ಎಂದರು.

ಗುರು ಮತ್ತು ಶಿಷ್ಯರ ಸಂಬಂಧಗಳು ಕರುಳುಬಳ್ಳಿ ಸಂಬಂಧಕ್ಕಿಂತ ಹೆಚ್ಚಾಗಿದೆ. ಕಲಿಸುವ ಕ್ರಿಯೆಯನ್ನೇ ಅಧ್ಯಾಪಕರು ಇಂದು ಕಳೆದುಕೊಳ್ಳುತ್ತಿದ್ದಾರೆ. ಕನ್ನಡದ ಪ್ರಜ್ಞೆಯನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು. ಜೊತೆಗೆ ನಮ್ಮನ್ನು ಆಳುವ ಸರ್ಕಾರಗಳು ಭಾಷೆಯನ್ನು ಬೆಳೆಸುವ ಇಚ್ಛಾಶಕ್ತಿಯನ್ನೇ ಬೆಳೆಸುತ್ತಿಲ್ಲ. ಇದು ಇಂದಿನ ವಿಪರ್ಯಾಸವಾಗಿದೆ ಎಂದರು.
Also read: ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಆತ್ಮಹತ್ಯೆ ಭಾಗ್ಯವನ್ನೇ ನೀಡುತ್ತಿದೆ: ಬಿ.ವೈ. ವಿಜಯೇಂದ್ರ
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಭಾರತ ಸರ್ಕಾರದ ಎನ್‍ವಿಎಸ್ ಶಿಕ್ಷಣ ಸಚಿವಾಲಯದ ನಿವೃತ್ತಿ ಜಂಟಿ ಆಯುಕ್ತ ಎ.ಎನ್.ರಾಮಚಂದ್ರ, ಮಾತೃಭಾಷೆಯ ಬಗ್ಗೆ ಅಧ್ಯಯನವೇ ಕಡಿಮೆಯಾಗಿದೆ. ಮನೆ ಭಾಷೆಯಾಗಿ ನಾವು ಬಳಸುತ್ತೇವೆ ನಿಜ. ಆದರೆ ಸಾರ್ವಜನಿಕ ಭಾಷೆವಾಗಿಯೂ ಇದು ಬೆಳೆಯಬೇಕಾಗಿದೆ. ಕನ್ನಡ ಕಲಿಯಲು ಇಂದು ಗಡಿಬಿಡಿಇದೆ. ಸಂಸ್ಕøತಿಯ ಚಟುವಟಿಕೆಗಳು ಕಡಿಮೆಯಾಗುತ್ತಿರುವ ಈ ಹೊತ್ತಿನಲ್ಲಿ ಕಾಲೇಜುಗಳಲ್ಲಿ ಕಲಾ ಪರಿಷತ್ತಿನಂತಹ ಸಂಘಟನೆಗಳು ಹೆಚ್ಚಾಗಬೇಕಾಗಿದೆ. ವಿದ್ಯಾರ್ಥಿಗಳು ಎಲ್ಲಾ ವಿಷಯಗಳ ಜೊತೆ ಕಲೆಯನ್ನು ಕೂಡ ಕಲಾತ್ಮಕವಾಗಿ ಅಧ್ಯಾಯನ ಮಾಡಬೇಕು ಎಂದರು.

ಸಿಂಡಿಕೇಟ್ ಸದಸ್ಯ ಮುಸಾಫೀರ್ ಪಾಷಾ, ಸಹ್ಯಾದ್ರಿ ಕಲಾ ಪರಿಷತ್‍ನ ಉಪಾಧ್ಯಕ್ಷ ರಾಧಾಕೃಷ್ಣ ಬಿ.ಎಸ್., ಗಾಯಕ ಕುಬೇರ್‍ನಾಯ್ಕ,ಪರಿಷತ್ತಿನ ಪದಾಧಿಕಾರಿಗಳಾದ ಲತಿಕಾ ಗಣಪತಿ ನಾಯ್ಕ, ಪೂರ್ಣಿಮಾ ಜಿ.ಎಸ್., ಪ್ರಣತಿ, ಲಿಖಿತಾ ವಿ.ಕೆ. ಉಮ್ಮೆಹನಿ, ಪವನ್‍ಕುಮಾರ್ ಮುಂತಾದವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post