ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರದ ನಿರ್ದೇಶನಾನುಸಾರ ೨೦೨೧ ನೇ ಸಾಲಿನ ಅಂಗವಾಗಿ ಶ್ರೀವಿಜಯ ಕಲಾನಿಕೇತನ (ರಿ) ಸಂಸ್ಥೆಯು ಅ. 27ರಿಂದ 29ರವರೆಗೆ ಕನ್ನಡಕ್ಕಾಗಿ ನಾವು ಎಂಬ ಮೂರು ದಿನಗಳ ವಿಶೇಷ ಕಾರ್ಯಕ್ರಮಗಳನ್ನು ಏರ್ಪಡಿಸಿದೆ.
ಅ.27ರ ಬುಧವಾರ ಪವಿತ್ರಾಂಗಣದಲ್ಲಿ ಮಕ್ಕಳಿಗೆ ಗಾದೆ ಹೇಳುವ ಸ್ಪರ್ಧೆ ಹಾಗೂ ಒಗಟು ಹೇಳುವ ಸ್ಪರ್ಧೆ, 28ರ ಗುರುವಾರ ಪವಿತ್ರಾಂಗಣದಲ್ಲಿ ಮಕ್ಕಳಿಗೆ ಕನ್ನಡದಲ್ಲಿ ಆಂಗ್ಲ ಪದ ಬಳಸದೆ ಒಂದು ನಿಮಿಷ ಮಾತನಾಡುವ ಸ್ಪರ್ಧೆ ಮತ್ತು 29ರ ಶುಕ್ರವಾರದಂದು ರಾಜೇಂದ್ರನಗರದ ಅನಿಕೇತನ ಸಭಾಂಗಣದಲ್ಲಿ ಸಾರ್ವಜನಿಕರಿಗೆ ಕನ್ನಡ ನಾಡು ನುಡಿಯ ಕುರಿತು ರಸಪ್ರಶ್ನೆ ಸ್ಪರ್ಧೆಗಳನ್ನು ನಡೆಸಲಾಗುತ್ತದೆ. ಪ್ರತಿದಿನ ಸಂಜೆ 6 ಗಂಟೆಗೆ ಈ ಕಾರ್ಯಕ್ರಮಗಳು ನಡೆಯಲಿವೆ.
ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ನಿಯಮಗಳನ್ನು ಅನುಸರಿಸಿ ಪಾಲ್ಗೊಳ್ಳುವಂತೆ ಕೋರಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post