ರಾಮಲಲ್ಲಾ ಅಯೋಧ್ಯೆಯಲ್ಲಿ Ayodhya ಜನವರಿ 22ರಂದು ಪ್ರತಿಷ್ಟೆ ನಡೆಯಲಿರುವ ಹಿನ್ನೆಲೆಯಲ್ಲಿ ಪ್ರತಿ ರಾಜ್ಯದವರಿಗೆ ಒಂದೊಂದು ದಿನ ನಿಗದಿ ಮಾಡಲಾಗಿದೆ. ಕರ್ನಾಟಕದವರಿಗೆ ಫೆಬ್ರವರಿ 19ರಂದು ಅವಕಾಶ ಇದೆ. ನೋಂದಣಿ ಮಾಡಿಕೊಂಡು ಹೋಗಬೇಕು. 3500 ಜನರಿಗೆ ಅವಕಾಶ ಸಿಗಲಿದೆ. ಬೆಂಗಳೂರಿನಿಂದ ವಿಶೇಷ ರೈಲು ಹೊರಡಲಿದ್ದು, ಸ್ವಂತ ಖರ್ಚಿನಲ್ಲಿ ಹೋಗಿ ಬರಬಹುದಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಪ್ರಾಂತ ಸಹಕಾರ್ಯವಾಹ ಪಟ್ಟಾಭಿರಾಮ್ ತಿಳಿಸಿದರು.
ಇದರ ಅಂಗವಾಗಿ ಜನವರಿ 01 ರಿಂದ 15ರವರೆಗೆ ಮನೆ ಮನೆ ಸಂಪರ್ಕ ಅಭಿಯಾನ ನಡೆಯಲಿದೆ. ಅಭಿಯಾನದಲ್ಲಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ಕರಪತ್ರ ಭಾವಚಿತ್ರ ಮತ್ತು ಮಂತ್ರಾಕ್ಷತೆಯನ್ನು ತಲುಪಿಸಲಿದ್ದಾರೆ. ಜನವರಿ 22ರಂದು ಮಾಡಬೇಕಿರುವ ಕಾರ್ಯಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದರು.
ವಿಶ್ವಹಿಂದೂ ಪರಿಷತ್, ಪರಿವಾರದ ಎಲ್ಲಾ ಸಂಘಟನೆಗಳು ಶ್ರೀರಾಮ ಭಕ್ತರನ್ನು ಜೋಡಿಸಿಕೊಂಡು ಅಭಿಯಾನ ನಡೆಸಲಾಗುವುದು. ಜನವರಿ 07ರಂದು ವಿಶೇಷ ಸಂಪರ್ಕ ಅಭಿಯಾನ ನಡೆಯಲಿದೆ. ಇದಕ್ಕಾಗಿ ವಿವಿಧ ಹಂತದಲ್ಲಿ ಸಭೆ ನಡೆಸಲಾಗಿದೆ. ಎಲ್ಲಾ ಸಿದ್ಧತೆ ನಡೆಸಲಾಗಿದೆ. ಡಿ.30ರಂದು ಶಿವಮೊಗ್ಗದ ಮೈಲಾರೇಶ್ವರ ದೇವಾಲಯದಲ್ಲಿ ಮಂತ್ರಾಕ್ಷತೆ ವಿತರಣೆ ಕಾರ್ಯಕ್ರಮ ಸಂಜೆ 4.30 ರಾಮಮಂದಿರ ಎಂಬುದು ಕೇವಲ ಮಂದಿರ ಅಲ್ಲ. ಅದೊಂದು ರಾಷ್ಟ್ರಮಂದಿರ. ಇದೊಂದು ಮಂದಿರದ ಪುನರುಜ್ಜಿವನ ಕಾರ್ಯಕ್ರಮ. ಶ್ರೀರಾಮ ಮರ್ಯಾದ ಪುರುಷೋತ್ತಮ, ರಾಮ ಸಾಂಸ್ಕøತಿಕ ಸ್ವರೂಪ, ಹಾಗಾಗಿ ಈ ಕಾರ್ಯ ಸಂಭ್ರಮ, ಭಕ್ತಿ, ಸಂತಸದಿಂದ ಆಗಬೇಕು ಎಂಬುದು ಎಲ್ಲರ ಅಪೇಕ್ಷೆ ಎಂದರು.
Also read: ಹೊಸ ವರ್ಷ ಸಂಭ್ರಮಾಚರಣೆ ವೇಳೆ ಈ ನಿಯಮಗಳನ್ನು ಪಾಲಿಸಿ: ಎಸ್‌ಪಿ ಮಿಥುನ್ ಕುಮಾರ್ ಸೂಚನೆ
ಎರಡು ವರ್ಷದ ಹಿಂದೆ ಪ್ರಧಾನಮಂತ್ರಿಗಳು. ಅಯೋಧ್ಯೆಯಲ್ಲಿ ಭೂಮಿ ಪೂಜೆ ನೆರವೇರಿಸಿದ್ದರು. ಗರ್ಭಗುಡಿಯಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠೆಯನ್ನು ಜಗತ್ತೇ ಕಾತರದಿಂದ ನೋಡುತ್ತಿದೆ. ಇದೀಗ ಭವ್ಯ ಮಂದಿರ ನಿರ್ಮಾಣ ಕಾರ್ಯ ನಡೆದಿದೆ ಎಂದರು.
ಮೂಲ ರಾಮಮಂದಿರವನ್ನು Ramamandira ಅನೇಕ ಬಾರಿ ಕೆಡವಲಾಗಿತ್ತು. ಅಲ್ಲಿ ಮಸೀದಿ ನಿರ್ಮಾಣವಾಗಿದ್ದು ಇತಿಹಾಸ, ಬ್ರಿಟೀಷರು ಮಸೀದಿಗೆ ಬೀಗ ಹಾಕಿದ್ದರು. ರಾಮನ ಪೂಜೆಗೂ ಅವಕಾಶ ಇರಲಿಲ್ಲ. 1982 ರಲ್ಲಿ ಅಲಹಾಬಾದ್ ಹೈಕೋರ್ಟ್ ಬೀಗ ಒಡೆದು, ಪೂಜೆಗೆ ಅವಕಾಶ ಕಲ್ಪಿಸಿತು. ಅದು ಮೊದಲ ಹಂತದ ವಿಜಯವಾಗಿತ್ತು. ನಂತರ ಸುಪ್ರೀಂಕೋರ್ಟ್ ಕಾನೂನುಬದ್ದವಾಗಿ ಮಂದಿರ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿದೆ. ಇದೊಂದು ಪವಿತ್ರ ಕಾರ್ಯ. ಇದಕ್ಕೆ ಜಾತಿ, ಭಾಷೆ, ಪ್ರಾಂತ, ಧರ್ಮ ಯಾವುದೂ ಇಲ್ಲ. ಸಾಕಷ್ಟು ಮಂದಿ ಮುಸ್ಲಿಮರು ಕೂಡ ಮಂದಿರ ನಿರ್ಮಾಣಕ್ಕೆ ಧನ ಸಹಾಯ ಮಾಡಿದ್ದಾರೆ. 50 ಲಕ್ಷ ಮೇಲ್ಪಟ್ಟು ದೇಣಿಗೆ ನೀಡಿದವರಿಗೆ ಜ.22ರಂದು ಆಹ್ವಾನ ಕೂಡ ನೀಡಲಾಗಿದೆ – ಎಂದು ತಿಳಿಸಿದರು.
ವಿಶ್ವಹಿಂದು ಪರಿಷತ್ ವಿಭಾಗ ಸಹ ಕಾರ್ಯದರ್ಶಿ ಚಂದ್ರಶೇಖರ್, ಜಿಲ್ಲಾಧ್ಯಕ್ಷ ಜೆ.ಆರ್. ವಾಸುದೇವ ಇದ್ದರು.










Discussion about this post