ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೆ.ಎಸ್. ಈಶ್ವರಪ್ಪನವರು K S Eshwarappa ಕಟ್ಟರ್ ರಾಷ್ಟ್ರೀಯವಾದಿ ಮತ್ತು ಪ್ರಧಾನಿ ಮೋದಿಯವರ PM Narendra Modi ಅಭಿಮಾನಿಯಾಗಿದ್ದು, ಅವರು ಯಾವುದೇ ಕಾರಣಕ್ಕೂ ಪಕ್ಷ ವಿರೋಧಿ ಚಿಂತನೆಯನ್ನು ಮಾಡುವುದಿಲ್ಲ ಎಂದು ಸಂಸದ ಬಿ.ವೈ. ರಾಘವೇಂದ್ರ MP Raghavendra ಭರವಸೆ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಕೆ.ಎಸ್. ಈಶ್ವರಪ್ಪನವರು ನಮ್ಮ ತಂದೆ ಬಿ.ಎಸ್. ಯಡಿಯೂರಪ್ಪ B S Yadiyurappa ಹಾಗೂ ಅನಂತ್ ಕುಮಾರ್ Ananth Kumar ಜೊತೆಗೆ ಪಕ್ಷ ಕಟ್ಟಿದವರು, ಅವರು ಕಟ್ಟರ್ ರಾಷ್ಟçವಾದಿ ಮತ್ತು ಪ್ರಧಾನಿ ಮೋದಿಯವರ ಅಭಿಮಾನಿಯಾಗಿದ್ದು, ಯಾವುದೇ ಕಾರಣಕ್ಕೂ ಪಕ್ಷ ವಿರೋಧಿ ಚಿಂತನೆಯನ್ನು ಅವರು ಮಾಡುವುದಿಲ್ಲ. ಶಿವಮೊಗ್ಗ ಕ್ಷೇತ್ರದ ಲೋಕಸಭಾ ಚುನಾವಣೆಯ ಸಾರಥ್ಯ ವಹಿಸಿ ರಥ ಮುನ್ನಡೆಸಲಿದ್ದಾರೆ ಎಂದರು.
ಬಿ.ಎಸ್. ಯಡಿಯೂರಪ್ಪನವರು ಯಾರಿಗೂ ದ್ರೋಹ ಮಾಡುವ ಪ್ರಶ್ನೆಯೇ ಇಲ್ಲ. ಅವರು ಲೋಕಸಭೆಗೆ ಸೋತಾಗ ಹೈಮಾಂಡ್ ಅವರನ್ನು ರಾಜ್ಯ ಸಭಾ ಸದಸ್ಯರನ್ನಾಗಿ ಮಾಡಲು ಹೊರಟ್ಟಿತ್ತು. ಆ ಸಂದರ್ಭದಲ್ಲಿ ಅವರು ನಾನು ಈಗಾಗಲೇ ರಾಜಶೇಖರ್ ಮೂರ್ತಿಯವರಿಗೆ ಭರವಸೆ ನೀಡಿದ್ದೇನೆ. ಅವರನ್ನೇ ರಾಜ್ಯಸಭಾ ಸದಸ್ಯರನ್ನಾಗಿ ಮಾಡಿ ಎಂದು ಹೈಕಮಾಂಡ್’ಗೆ ತಿಳಿಸಿ ತಮಗೆ ಬಂದ ಅವಕಾಶವನ್ನು ತಿರಸ್ಕರಿಸಿದ್ದರು. ಯಾವುದೇ ಕಾರಣಕ್ಕೂ ಅವರು ಯಾರಿಗೂ ಅನ್ಯಾಯ ಮಾಡುವ ಪ್ರಶ್ನೆಯೇ ಇಲ್ಲ ಎಂದರು.
Also read: ಸಿಎಎ ಜಾರಿ ವಿರೋಧಿಸುವ ಯಾವುದೇ ಹಕ್ಕು ನಿಮಗಿಲ್ಲ | ಅಮಿತ್ ಶಾ ಚಾಟಿ
ಪ್ರತಾಪಸಿಂಹ Prathap Simha ಅವರಿಗೆ ಲೋಕಸಭಾ ಸ್ಥಾನ ತಪ್ಪಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಅವರು ಹೈಕಮಾಂಡ್ ಚಿಂತನೆ ಏನಿದೆಯೂ ಗೊತ್ತಿಲ್ಲ. ಹೊಸಬರಿಗೆ ಅವಕಾಶ ನೀಡುವ ಚಿಂತನೆ ಇರಬಹುದು. ನಾನು ಈಗಾಗಲೇ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಚನ್ನಬಸಪ್ಪ, ಭಾನುಪ್ರಕಾಶ್, ಅಶೋಕ್ ನಾಯಕ್ ಮತ್ತಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post