ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಆರ್.ಎಸ್.ಎಸ್. #RSS ಹಾಗೂ ಬಿಜೆಪಿ ವಿಷಕಾರಿ ಹಾವು ಇದ್ದಂತೆ. ಆರ್.ಎಸ್.ಎಸ್. ಸ್ವಯಂ ಸೇವಕರನ್ನು ಕೊಲ್ಲಿ ಎಂಬ ಹೇಳಿಕೆ ನೀಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ #Mallikarjuna Kharge ವಿರುದ್ಧ ಸುಮೊಟೋ ಕೇಸ್ ಹಾಕಬೇಕು ಮತ್ತು ಖರ್ಗೆಯವರು ದೇಶದ ಜನರ ಕ್ಷಮೆ ಕೇಳಬೇಕು ಎಂದು ರಾಷ್ಟ್ರ ಭಕ್ತರ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ #K S Eshwarappa ಆಗ್ರಹಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆರ್.ಎಸ್.ಎಸ್. ಎಂದರೆ ಒಂದು ವ್ಯಕ್ತಿತ್ವ ನಿರ್ಮಾಣದ ಸಂಸ್ಥೆಯಾಗಿದೆ. ಹಿಂದುತ್ವದ ಮತ್ತು ರಾಷ್ಟ್ರೀಯತೆ ಬಗ್ಗೆ ಜಾಗೃತಿ ಮೂಡಿಸುತ್ತಾ ಬರುತ್ತಿದೆ. ಇಡೀ ದೇಶದ ಜನರು ಅದನ್ನು ಒಪ್ಪಿದ್ದಾರೆ. ಆದರೆ ಖರ್ಗೆಯವರಂತಹ ಹಿರಿಯರು ಹೀಗೆ ಮಾತನಾಡಬಾರದಿತ್ತು. ಅವರು ದೇಶದ ಜನರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
Also read: ತೀರ್ಥಹಳ್ಳಿ | ನದಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ತೇಲುತ್ತಿದ್ದ ವ್ಯಕ್ತಿಯ ರಕ್ಷಿಸಿದ ಪೊಲೀಸರು

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post