ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಆರ್.ಎಸ್.ಎಸ್. #RSS ಹಾಗೂ ಬಿಜೆಪಿ ವಿಷಕಾರಿ ಹಾವು ಇದ್ದಂತೆ. ಆರ್.ಎಸ್.ಎಸ್. ಸ್ವಯಂ ಸೇವಕರನ್ನು ಕೊಲ್ಲಿ ಎಂಬ ಹೇಳಿಕೆ ನೀಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ #Mallikarjuna Kharge ವಿರುದ್ಧ ಸುಮೊಟೋ ಕೇಸ್ ಹಾಕಬೇಕು ಮತ್ತು ಖರ್ಗೆಯವರು ದೇಶದ ಜನರ ಕ್ಷಮೆ ಕೇಳಬೇಕು ಎಂದು ರಾಷ್ಟ್ರ ಭಕ್ತರ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ #K S Eshwarappa ಆಗ್ರಹಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆರ್.ಎಸ್.ಎಸ್. ಎಂದರೆ ಒಂದು ವ್ಯಕ್ತಿತ್ವ ನಿರ್ಮಾಣದ ಸಂಸ್ಥೆಯಾಗಿದೆ. ಹಿಂದುತ್ವದ ಮತ್ತು ರಾಷ್ಟ್ರೀಯತೆ ಬಗ್ಗೆ ಜಾಗೃತಿ ಮೂಡಿಸುತ್ತಾ ಬರುತ್ತಿದೆ. ಇಡೀ ದೇಶದ ಜನರು ಅದನ್ನು ಒಪ್ಪಿದ್ದಾರೆ. ಆದರೆ ಖರ್ಗೆಯವರಂತಹ ಹಿರಿಯರು ಹೀಗೆ ಮಾತನಾಡಬಾರದಿತ್ತು. ಅವರು ದೇಶದ ಜನರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
Also read: ತೀರ್ಥಹಳ್ಳಿ | ನದಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ತೇಲುತ್ತಿದ್ದ ವ್ಯಕ್ತಿಯ ರಕ್ಷಿಸಿದ ಪೊಲೀಸರು
ಅಧಿಕಾರದ ದಾಹ ಮತ್ತು ಮುಸಲ್ಮಾನರನ್ನು ಸಂತೃಪ್ತಿಗೊಳಿಸುವ ದೃಷ್ಟಿಯಿಂದ ಇವರು ಈ ಹೇಳಿಕೆ ನೀಡಿದ್ದಾರೆ. ಇಂದಿರಾಗಾಂಧಿ ಮತ್ತು ನೆಹರೂ ಅವರೂ ಕೂಡ ಆರ್.ಎಸ್.ಎಸ್. ನಿಷೇಧಿಸಲು ಹೊರಟಿದ್ದರು. ಆದರೆ ಆಗಲಿಲ್ಲ. ಆಗವುದೂ ಇಲ್ಲ. ಖರ್ಗೆಯವರು ಉದ್ವೇಗದಲ್ಲಿ ಹೇಳಿದ್ದರೆ ಆ ಮಾತು ಬೇರೆ. ಆದರೆ ಉದ್ದೇಶಪೂರ್ವಕವಾಗಿ ಹೇಳಿದ್ದಾರೆ. ಹಾಗಾಗಿ ನನ್ನ ವಿರುದ್ದ ಸುಮೊಟೊ ಕೇಸ್ ದಾಖಲಿಸಿದಂತೆ ಅವರ ಮೇಲೂ ಕೂಡ ಕೇಸ್ ದಾಖಲಿಸಬೇಕು ಎಂದು ಆಗ್ರಹಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post