ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ : ಶಿವಮೊಗ್ಗದಲ್ಲಿ ಹುಟ್ಟಿ ಬೆಳೆದು ಹೆಸರುವಾಸಿಯಾದ ನಟ ಸುದೀಪ್ ಹಂತ ಹಂತವಾಗಿ ಸಾಧನೆಯ ಮೆಟ್ಟಿಲುಗಳನ್ನು ಏರಿ ಅಪಾರವಾದ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.
ಕರ್ನಾಟಕದಾದ್ಯಂತ ಅಷ್ಟೇ ಅಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಅಪಾರವಾದ ಕೀರ್ತಿ ಪಡೆದಿರುವ ನಟ ಸುದೀಪ್ ಗೆ ಸಾವಿರಾರು ಮಂದಿ ಅಭಿಮಾನಿಗಳಿದ್ದಾರೆ. ಅವರ ಹೆಸರಿನಲ್ಲಿ ಹಲವಾರು ಸಂಘ-ಸಂಸ್ಥೆಗಳು ಸಹ ಇದ್ದು, ಕೋವಿಡ್ ನಂತಹ ಸಮಯದಲ್ಲಿ ಹಸಿದವರಿಗೆ ಅನ್ನ ಹೀಗೆ ಮಹತ್ತರವಾದ ಅನೇಕ ಸಾಮಾಜಿಕ ಕಾರ್ಯಗಳನ್ನು ಅವರ ಅಭಿಮಾನಿಗಳು ಮಾಡಿಕೊಂಡು ಬರುತ್ತಿದ್ದಾರೆ.

ಇದೀಗ ಕಿಚ್ಚನ ಗೂಡು ಸೇವಾ ಸಮಿತಿ (ರಿ), ಕುಂಬಾರ ಗುಂಡಿ ಕಿಚ್ಚನ ಹುಡುಗರು, 50 ದಿನಗಳಿಗಿಂತ ಮುಂಚಿತವಾಗಿಯೇ ಕಿಚ್ಚನ ಹುಟ್ಟು ಹಬ್ಬವನ್ನು ಆಚರಿಸಿ ಸಂಭ್ರಮಿಸಿದ್ದಾರೆ.
ಈ ಸಂಭ್ರಮದಲ್ಲಿ ಕಿಚ್ಚನ ಗೋಡು ಸಂಘದ ಸದಸ್ಯರು ಉಪಸ್ಥಿತರಿದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















