ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸಾಗರ: ತಮ್ಮ ನಟನೆ ಮಾತ್ರವಲ್ಲ ಸಾಮಾಜಿಕ ಸೇವಾ ಕಾರ್ಯಗಳಿಂದ ಜನ ಮಾನಸದಲ್ಲಿ ನೆಲೆಸಿರುವ ಸ್ಯಾಂಡಲ್’ವುಡ್ ಬಾದ್’ಷಾ ಕಿಚ್ಚ ಸುದೀಪ್ ಈಗ ಅಂತಹುದ್ದೇ ಮಹತ್ವದ ಕಾರ್ಯವೊಂದಕ್ಕೆ ಸದ್ದಿಲ್ಲದೇ ಕೈ ಹಾಕಿದ್ದಾರೆ.
ತಮ್ಮ ಕಿಚ್ಚ ಸುದೀಪ್ ಚಾರಿಟೆಬಲ್ ಸೊಸೈಟಿ ಈಗ ನಾಲ್ಕು ವರ್ಷ ಪೂರೈಸಿರುವ ಬೆನ್ನಲ್ಲೇ ಮಲೆನಾಡಿನ ಹಳ್ಳಿಯೊಂದನ್ನು ದತ್ತು ಪಡೆಯುವ ಮೂಲಕ ಸಮಾಜಮುಖಿ ಕಾರ್ಯ ಮಾಡಿದ್ದಾರೆ.
ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ಮೂಲಕ ನಟ ಸುದೀಪ್ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆವಿಗೆ ಎಂಬ ಗ್ರಾಮವನ್ನು ದತ್ತು ಪಡೆದುಕೊಂಡಿದ್ದಾರೆ. ಆವಿಗೆ ಗ್ರಾಮದ ಅಭಿವೃದ್ದಿ ಹಾಗೂ ಮಾದರಿ ಗ್ರಾಮವನ್ನಾಗಿಸುವ ಮಹತ್ವಾಕಾಂಕ್ಷೆಯಿಂದ ಸುದೀಪ್ ಚಾರಿಟೇಬಲ್ ಸೊಸೈಟಿ ಈ ಗ್ರಾಮವನ್ನು ದತ್ತು ಪಡೆದಿದೆ. ಈ ಕುರಿತು ಸ್ಥಳೀಯ ಶಾಸಕರು ಹಾಗೂ ಆಡಳಿತ ಮಂಡಳಿಯಿಂದ ಅನುಮತಿ ಸಹ ಪಡೆದುಕೊಳ್ಳಲಾಗಿದೆ.
ದತ್ತು ಪಡೆದುಕೊಂಡಿರುವ ಗ್ರಾಮದಲ್ಲಿ ಏನೆಲ್ಲಾ ಅಭಿವೃದ್ಧಿ ಕಾರ್ಯಗಳು ಆಗಲಿವೆ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.
ಸುದೀಪ್ ಅವರ ಗ್ರಾಮವೊಂದನ್ನು ದತ್ತು ಪಡೆದುಕೊಳ್ಳುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ದಿಪಡಿಸಿರುವ ಉದಾಹರಣೆಗಳಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news









Discussion about this post