ಶಿವಮೊಗ್ಗ: ಹಣಗೆರೆ ವೈಲ್ಡ್ ಲೈಫ್ ರೇಂಜ್’ನ ಬಳಿಯ ಕಲ್ಲುಕೊಪ್ಪ ಮನೆಯೊಂದರಲ್ಲಿ ಅವಿತಿದ್ದ ಕಾಳಿಂಗ ಸರ್ಪವನ್ನು ಸೆರೆ ಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಡಲಾಗಿದೆ.
ಕಲ್ಲುಕೊಪ್ಪ ಶೇಖರಪ್ಪ ಎಂಬುವರ ಮನೆಯ ಒಳಗೆ ಸೇರಿದ್ದ ಕಾಳಿಂಗ ಸರ್ಪವನ್ನು ಉರಗ ತಜ್ಞ ಬೆಳ್ಳೂರು ನಾಗರಾಜ ಅವರು ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ಸೆರೆಹಿಡಿದು ಸಮೀಪದ ಕಾಡಿಗೆ ಬಿಟ್ಟರು.
ಮಿಲನ ಹಾಗೂ ಗೂಡು ಕಟ್ಟಿ (mating n nesting) ಮೊಟ್ಟೆ ಇಡುವ ಅವಧಿಯು ಮುಗಿದ ಮೇಲೆ ಈಗ ಕಾಳಿಂಗಗಳು ಆಹಾರ ಹುಡುಕುವ ಕಡೆಗೆ ಹೆಚ್ಚು ಗಮನ ಕೊಡುತ್ತವೆ. ಕೇರೆಹಾವು, ನಾಗರಹಾವು, ಉಡಗಳಿಗೆ ಹುಡುಕಾಟ ನಡೆಸುತ್ತವೆ ಎಂದು ಉರಗ ತಜ್ಞ ನಾಗರಾಜ್ ತಿಳಿಸಿದರು.
ಹಾವನ್ನು ಹಿಡಿದ ನಂತರ ಕಾಳಿಂಗಗಳ ಜೀವನ ಶೈಲಿ, ಹಾವು ಮಾನವ ಸಂಘರ್ಷ ಹಾಗೂ ಹಾವು ಕಡಿತಗಳ ನಿರ್ವಹಣೆ ಬಗ್ಗೆ ಮಾಹಿತಿಯನ್ನು ಕೊಡಲಾಯಿತು.
ಹಣಗೆರೆ ವನ್ಯಜೀವಿ ವಲಯದ ಸಿಬ್ಬಂದಿಗಳು ಜೊತೆಗಿದ್ದರು.
ಮಾಹಿತಿ: ಮಹೇಶ ಹಿಂಡ್ಲೆಮನೆ
Discussion about this post