ಬೆಂಗಳೂರು: ದೇಶ ಹಾಗೂ ಹಿಂದೂ ಧರ್ಮಕ್ಕೆ ತನ್ನದೇ ಆದ ರೀತಿಯಲ್ಲಿ ವಿಶಿಷ್ಟ ಕೊಡುಗೆ ನೀಡುತ್ತಾ ಬಂದಿರುವ ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠ ಇನ್ನೊಂದು ಮಹತ್ವದ ಹೆಜ್ಜೆಯನ್ನಿಟ್ಟಿದೆ.
ಜ್ಞಾನದಾ ಸಂಸ್ಕೃತಿ ವಿದ್ಯಾಲಯ ಹಾಗೂ ತೃತೀಯ ಮಂತ್ರಾಲಯ ಮುದ್ಗಲ್ ಸಹಯೋಗದೊಂದಿಗೆ ಜುಲೈ 4ರಿಂದ 10 ದಿನಗಳ ಕಾಲ ಸಂಸ್ಕೃತ-ಸಂಸ್ಕೃತಿ-ಸಂಸ್ಕಾರ ಶಿಬಿರವನ್ನು ಆಯೋಜಿಸಿದೆ.
ಪೂರ್ಣಪ್ರಜ್ಞ ವಿದ್ಯಾಪೀಠದ ಕೊಠಡಿ ಸಂಖ್ಯೆ 42ರಲ್ಲಿ ಶಿಬಿರ ನಡೆಯಲಿದ್ದು, ಶ್ರೀಕೃಷ್ಣರಾಜ ಕುತ್ಪಾಡಿ ಅವರು ಇದನ್ನು ನಡೆಸಿಕೊಡಲಿದ್ದಾರೆ. ಶಿಬಿರ ಸಂಪೂರ್ಣ ಉಚಿತವಾಗಿದ್ದು, ಪ್ರತಿದಿನ ಸಂಜೆ 5.15ರಿಂದ 6.15ರವರೆಗೂ ನಡೆಯಲಿದೆ. ಶಿಬಿರದಲ್ಲಿ ಪಾಲ್ಗೊಳ್ಳಲು ಯಾವುದೇ ವಯೋಮಿತಿಯಿಲ್ಲ.
ಈ ಕುರಿತಂತೆ ಕಲ್ಪ ನ್ಯೂಸ್ ಜೊತೆಯಲ್ಲಿ ಮಾತನಾಡಿದ ಶ್ರೀಕೃಷ್ಣರಾಜ ಕುತ್ಪಾಡಿ ಅವರು, ಸರಸ-ಸರಳ-ಸುಂದರವಾದ ದೇವಭಾಷೆ ಸಂಸ್ಕೃತ. ಉತ್ಕೃಷ್ಟವಾದ ಸಂಸ್ಕೃತಿ-ಸಂಸ್ಕಾರಗಳ ಹೊತ್ತ ಈ ಭಾಷೆ ಎಲ್ಲ ಭಾಷೆಗಳ ತಾಯಿಬೇರು ಎಂಬುದು ಭಾಷಜ್ಞರ ಅಂಬೋಣ. ವ್ಯಕ್ತಿಯಿಂದ ವ್ಯಕ್ತಿಗೆ ದೇಶದಿಂದ ದೇಶಕ್ಕೆ ಪೀಳಿಗೆಯಿಂದ ಪೀಳಿಗೆಗೆ ಸಂಸ್ಕೃತಿ-ಸಂಸ್ಕಾರಗಳ ಅನ್ವರ್ಥವಾಗಿ ವರ್ಗಾಯಿಸುವ ಈ ಭಾಷೆಯ ಕಲಿಕೆ ಭಾರತೀಯರಾದ ನಮಗೆಲ್ಲ ಅನಿವಾರ್ಯ ಎನ್ನುತ್ತಾರೆ.
ನಮ್ಮ ಸತ್ಯವಾದ ಇತಿಹಾಸವನ್ನು, ಪ್ರಾಚೀನ ವಿದ್ಯೆಗಳನ್ನು, ಅಪೂರ್ವ ವಿಜ್ಞಾನವನ್ನು ಹೊತ್ತ ಸಂಸ್ಕೃತ ಭಾಷಾಭಾರತಿ ಈ ನೆಲದ ಹೆಮ್ಮೆ. ಉಳಿಸಿ ಬೆಳೆಸುವುದು ನಮ್ಮ ಆದ್ಯ ಕರ್ತವ್ಯ. ಅದಕಾಗಿ ಕೆರೆಯ ನೀರನೆ ಕೆರೆಗೇ ಅರ್ಪಿಸುವ ಪುಟ್ಟ ಪ್ರಯತ್ನವನ್ನು ಈ ಶಿಬಿರದ ಮೂಲಕ ಮಾಡುತ್ತಿದ್ದೇವೆ ಎಂದಿದ್ದಾರೆ.
ಆಸಕ್ತರು ಮೊಬೈಲ್ ಸಂಖ್ಯೆ 9986550610ಗೆ ಸಂಪರ್ಕಿಸಬಹುದು.
Discussion about this post