ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ತಮ್ಮ ಮಕ್ಕಳನ್ನು ವೈದ್ಯರನ್ನಾಗಿ ಮಾಡಬೇಕು ಎಂಬ ನಿಮ್ಮ ಪೋಷಕರ ಕನಸು ಹಾಗೂ ಶ್ರಮವನ್ನು ಅರಿತು, ಕಷ್ಟಪಟ್ಟು ಓದಿ ಸಮಾಜಕ್ಕೆ ಮಾದರಿ ವೈದ್ಯರಾಗಿ ಎಂದು ಸುಬ್ಬಯ್ಯ ವೈದ್ಯಕೀಯ ಕಾಲೇಜಿನ #Subbaiah Medical College ವೈದ್ಯಕೀಯ ನಿರ್ದೇಶಕ ಡಾ.ಎಸ್. ನಾಗೇಂದ್ರ #Dr. Nagendra ಕರೆ ನೀಡಿದರು.
ಮೊದಲ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಓರಿಯಂಟೇಶನ್ ಡೇ ಕಾರ್ಯಕ್ರಮದಲ್ಲಿ #Orientational Day Program ಅವರು ಮಾತನಾಡಿದರು.
ನಿಮ್ಮ ಪೋಷಕರ ಪ್ರಾರ್ಥನೆ ಹಾಗೂ ಶ್ರಮದಿಂದಾಗಿ ಇಂದು ನೀವುಗಳು ಇಲ್ಲಿ ಕುಳಿತಿದ್ದೀರಿ. ಅಲ್ಲದೇ, ಇದರ ಹಿಂದೆ ನಿಮ್ಮ ಹಲವು ವರ್ಷಗಳ ಶ್ರಮ ಇದೆ. ಇದನ್ನು ಅರಿತು, ನಿಮ್ಮ ಶ್ರಮವನ್ನು ಹಾಳುಮಾಡಿಕೊಳ್ಳದಂತೆ ಜಾಗ್ರತೆ ವಹಿಸಿ ಕಲಿಯಿರಿ ಎಂದರು.
ವೈದ್ಯರಾಗುವ ಹೆಜ್ಜೆ ಇಟ್ಟಿರುವ ನೀವುಗಳು ಸಮಾಜಕ್ಕೆ ಮುಖ್ಯವಾಗಿದ್ದು, ಜವಾಬ್ದಾರಿ ಹೆಚ್ಚಾಗಿದೆ. ಈ ಕ್ಷೇತ್ರದಲ್ಲಿ ಎಷ್ಟು ಸಾಧ್ಯವೋ ಅಷ್ಟು ಸಾಧನೆ ಮಾಡುವುದು ನಿಮ್ಮ ಜೀವನದ ಗುರಿಯಾಗಿರಲಿ. ದಿನಕ್ಕೆ ಕನಿಷ್ಠ ಐದು ಗಂಟೆ ಶ್ರಮವಹಿಸಿ ಓದಿ. ನಮ್ಮದು ಖಾಸಗೀ ಕಾಲೇಜು ಅಗಿದ್ದರೂ, ಪ್ರತಿಷ್ಠಿತ ಸರ್ಕಾರಿ ಕಾಲೇಜುಗಳಿಗಿಂತಲೂ ಶೈಕ್ಷಣಿಕವಾಗಿ ಸಾಧನೆ ಮಾಡಿದೆ. ಇದು ನಿಮಗೆ ಮಾದರಿಯಾಗಲಿ ಎಂದರು.
Also read: ಶಿವಮೊಗ್ಗ | ಶೋರೂಂನಲ್ಲಿ ಅಗ್ನಿ ಅವಘಡ | ಸುಟ್ಟು ಕರಕಲಾದ ಬೈಕ್‌ಗಳು
ಕಾಲೇಜಿನ ಡೀನ್ ಡಾ.ವಿನಾಯಕ್ ಮಾತನಾಡಿ, ನಮ್ಮ ಕಾಲೇಜಿನೊಂದಿಗೆ ನಗರದ ಹಲವು ವೈದ್ಯಕೀಯ ಸಂಸ್ಥೆಗಳು ಸಹಕಾರ ಹೊಂದಿದ್ದು, ಇವುಗಳು ನಿಮಗೆ ಕಲಿಯಲು ಅನುಕೂಲವಾಗಿದೆ. ಇದರೊಂದಿಗೆ ನಮ್ಮ ಕಾಲೇಜಿನಲ್ಲಿ ತಜ್ಞ ವೈದ್ಯರ ತಂಡವಿದ್ದು, ಅತ್ಯುತ್ತಮ ಗುಣಮಟ್ಟದ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲಾಗಿದೆ. ಎಐ ತಂತ್ರಜ್ಞಾನ ಬಳಸಿಕೊಂಡು ಉನ್ನತೀಕರಿಸಿದ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದರು.
ಪ್ರಾಂಶುಪಾಲ ಡಾ.ಸಿ.ಎಂ. ಸಿದ್ದಲಿಂಗಪ್ಪ ಮಾತನಾಡಿ, ವೈದ್ಯರಾಗಬೇಕು ಎಂಬ ನಿಮ್ಮ ಪೋಷಕರ ಕನಸು ಇಂದು ನನಸಾಗುವ ಹಾದಿಯ ಮೊದಲ ಘಟ್ಟವಾಗಿ ಇಂದು ನೀವಿಲ್ಲಿ ಕುಳಿತಿದ್ದೀರಿ. ಇಂದಿನಿAದ ಈ ಕ್ಷೇತ್ರದ ನಿಮ್ಮ ಪ್ರಯಾಣ ಆರಂಭವಾಗಿದೆ. ಪಿಯುಸಿ ನಂತರ ಮಹತ್ವದ ಹಂತ ಇದಾಗಿದೆ ಎಂದರು.
ಇಷ್ಟು ದಿನ ನಿಮ್ಮ ಜೀವನವೇ ಬೇರೆ. ಇನ್ನು ಮುಂದಿನದೇ ಬೇರೆ. ಇನ್ನು ಮುಂದೆ ಸಮಾಜ ನಿಮ್ಮನ್ನು ಗಮನಿಸುತ್ತಿರುತ್ತದೆ. ಹೀಗಾಗಿ, ಘನತೆಯನ್ನು ರೂಢಿಸಿಕೊಳ್ಳುವುದರೊಂದಿಗೆ, ಸದಾ ಕಾಲ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ವೈದ್ಯಕೀಯ ಶಿಕ್ಷಣದಲ್ಲಿ ಈಗ ಬಹಳಷ್ಟು ಬದಲಾವಣೆಯಾಗಿದೆ. ಪಠ್ಯಗಳು ಹೆಚ್ಚಾಗಿದೆ. ಹೀಗಾಗಿ ಹೆಚ್ಚಿನ ಶ್ರಮವಹಿಸಬೇಕಿದೆ. ಬೇರೆ ವಿಚಾರಗಳಿಗೆ ಹೆಚ್ಚಿನ ಗಮನ ಹರಿಸದೇ ಓದಿನ ಬಗ್ಗೆ ಗಮನ ಹರಿಸಿ. ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ. ಇರುವ ಸಮಯವನ್ನು ಸದುಪಯೋಗ ಮಾಡಿಕೊಳ್ಳಿ. ಇದರೊಂದಿಗೆ ಪೋಷಕರೂ ಸಹ ಆಗಾಗ ಕಾಲೇಜಿಗೆ ಭೇಟಿ ನೀಡಿ, ಪ್ರಗತಿಯ ಬಗ್ಗೆ ವಿಚಾರಿಸುತ್ತಿರಬೇಕು ಎಂದರು.
ಅನಾಟಮಿ ವಿಭಾಗದ ಮುಖ್ಯಸ್ಥರಾದ ಡಾ.ರವಿಕುಮಾರ್, ಫಿಸಿಯೋಲಜಿ ವಿಭಾಗದ ಮುಖ್ಯಸ್ಥರಾದ ಡಾ.ಚೇತನ್ ಹಾಗೂ ಬಯೋ ಕೆಮಿಸ್ಟ್ರಿ ವಿಭಾಗದ ಮುಖ್ಯಸ್ಥರಾದ ಡಾ.ಕೆ.ಎಚ್. ಚಂದ್ರಕಾಂತ್ ಅವರುಗಳು ತಮ್ಮ ವಿಭಾಗದ ವೈದ್ಯರು ಹಾಗೂ ವಿಭಾಗದ ಕುರಿತಾಗಿ ಪರಿಚಯ ಮಾಡಿಕೊಟ್ಟರು.
ವೈದ್ಯಕೀಯ ಕಾಲೇಜಿನ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ಲತಾ ತೆಲಂಗ್, ಕಾಲೇಜಿನ ಪ್ರಮುಖರಾದ ಆದಿಶೇಷ, ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ಎಸ್. ಸುರೇಶ್, ಉಪಪ್ರಾಂಶುಪಾಲ ಡಾ. ಮಿಥುನ್ ಕುಮಾರ್, ಡೆಪ್ಯೂಟಿ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ. ಕಮಲ್ ಪಾಂಡ್ಯನ್ ಸೇರಿದಂತೆ ಕಾಲೇಜಿನ ವೈದ್ಯಕೀಯ ಹಾಗೂ ವೈದ್ಯಕೀಯೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post