ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಐಪಿಎಲ್‌ನ #IPL ಎಲಿಮಿನೇಷನ್ 1 ಹಂತದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು #RCB ಮತ್ತು ರಾಜಸ್ಥಾನ್ ರಾಯಲ್ಸ್ #Rajastan Royals ಇಂದು ಮುಖಾಮುಖಿಯಾಗುತ್ತಿದ್ದು, ವಿರಾಟ್ ಕೊಹ್ಲಿ ಅಭಿಮಾನಿಯೊಬ್ಬರು ಕೊಯ್ಲಿ ಜರ್ಸಿ ನಂಬರ್ ಟ್ಯಾಟೋ ಹಾಕಿಸಿಕೊಂಡಿದ್ದಾರೆ.
ಕಮಲಾ ನೆಹರು ಕಾಲೇಜಿನಲ್ಲಿ ವಿದ್ಯಾರ್ಥಿನಿ ಸಿಂಚನಾ ವಿರಾಟ್ ಕೊಹ್ಲಿ #Virat Kohli ಅಭಿಮಾನಿ. ಇದೇ ಕಾರಣಕ್ಕೆ ಜರ್ಸಿ ನಂಬರ್ 18 ಅನ್ನು ಟ್ಯಾಟೋ ಹಾಕಿಸಿಕೊಂಡಿದ್ದಾರೆ. ‘ವಿರಾಟ್ ಕೊಯ್ಲಿ ಅಂದರೆ ತುಂಬಾ ಇಷ್ಟ. ಇವತ್ತು ಕೊಯ್ಲಿ ಸೆಂಚುರಿ ಭಾರಿಸಲಿದ್ದಾರೆ. ಆರ್‌ಸಿಬಿ ದ್ವಿಶತಕ ಮಾಡಲಿದೆ. ಬ್ಯಾಟಿಂಗ್‌ನಲ್ಲಿ ವಿರಾಟ್ ಕೊಹ್ಲಿ ಇಷ್ಟವಾಗುತ್ತಾರೆ. ಬೌಲಿಂಗ್‌ನಲ್ಲಿ ಸಿರಾಜ್ ಆಟ ಇಷ್ಟವಾಗುತ್ತದೆ’ ಎಂದು ತಿಳಿಸಿದ್ದಾರೆ. ಇನ್ನು, ಕಮಲಾ ನೆಹರು ಕಾಲೇಜು ವಿದ್ಯಾರ್ಥಿನಿಯರು ಆರ್‌ಸಿಬಿಗೆ ಶುಭ ಹಾರೈಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















Discussion about this post