ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೋಟೆ ಶ್ರೀಮಾರಿಕಾಂಬ ಜಾತ್ರಾ ಮಹೋತ್ಸವದ #Kote Marikamba Fair ಅಂಗವಾಗಿ ನಮ್ಮೂರ ಬಳಗದಿಂದ ರಾಷ್ಟ್ರ ಮಟ್ಟದ ಟಗರು ಕಾಳಗದ #National Level Tagaru Kalaga ಪ್ರಚಾರ ಪೋಸ್ಟರ್ ಬಿಡುಗಡೆಗೊಳಿಸಿ, ಸಾಮಾಜಿಕ ಜಾಲತಾಣದ ಮುಖಪುಟಕ್ಕೂ ಸಹ ಇಂದು ಚಾಲನೆ ನೀಡಲಾಯಿತು.
ಕೋಟೆ ಶ್ರೀ ಮಾರಿಕಾಂಬ ದೇವಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಿತಿಯ ಅಧ್ಯಕ್ಷರಾದ ಎಸ್.ಕೆ. ಮರಿಯಪ್ಪ ಅವರು, ಪೋಸ್ಟರ್ ಬಿಡುಗಡೆಗೊಳಿಸಿ, ಸಾಮಾಜಿಕ ಜಾಲತಾಣ ಮುಖಪುಟಕ್ಕೆ ಚಾಲನೆ ನೀಡಿದರು.
ನಮ್ಮೂರ ಬಳಗ, ಶಿವಮೊಗ್ಗ ವತಿಯಿಂದ, ಪ್ರತಿಷ್ಠಿತ ‘ಕೋಟೆ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವದ’ ಅಂಗವಾಗಿ ಪ್ರಪ್ರಥಮ ಬಾರಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ಫೆ.15ರಂದು ಆಯೋಜಿಸಿರುವ ರಾಷ್ಟ್ರಮಟ್ಟದ ಭಾರಿ ಟಗರು ಕಾಳಗ ಪಂದ್ಯಾವಳಿಗಳ ಪ್ರಚಾರದ ಪೋಸ್ಟರ್ ಬಿಡುಗಡೆ ಹಾಗೂ ಸಾಮಾಜಿಕ ಜಾಲತಾಣಗಳಾದ ಫೇಸ್’ಬುಕ್, ಇನ್‌ಸ್ಟಾಗ್ರಾಂ , ಟ್ವಿಟ್ಟರ್ ಖಾತೆಗಳಿಗೆ ಚಾಲನೆ ನೀಡಲಾಯಿತು.
ಮಾರಿಕಾಂಬ ಸಮಿತಿಯ ಪದಾಧಿಕಾರಿಗಳಾದ ಎನ್. ಉಮಾಪತಿ, ಹನುಮಂತಪ್ಪ, ರಾಮಯ್ಯ, ಸುಧೀರ್ ನಮ್ಮೂರ ಬಳಗದ ಪ್ರಧಾನ ಸಂಚಾಲಕರಾದ ಕೆ. ರಂಗನಾಥ್, ಗೌರವ ಸಂಚಾಲಕರುಗಳಾದ ನಾಗರಾಜ್ ಕಂಕಾರಿ, ಎಚ್. ಪಾಲಾಕ್ಷಿ, ಐಡಿಯಲ್ ಗೋಪಿ, ಸಿ.ಎಚ್. ಮಾಲ್ತೇಶ್, ಜಿ.ಡಿ. ಮಂಜುನಾಥ್, ಸಿ. ರವಿ, ಸಂಚಾಲಕರುಗಳಾದ ಕೆ.ಆರ್. ಸುರೇಶ್, ರಾಮಕೃಷ್ಣ ಮುಡ್ಲಿ,ರವಿ ಕುಳ್ಳಿ, ಹರೀಶ್ ಆð,ವಿಜಯ್ ಕುಮಾರ್, ಎಚ್.ಪಿ. ಗಿರೀಶ್, ಬಿ. ಲೋಕೇಶ್, ಆಂಜನೇಯ ವಿದ್ಯಾನಗರ , ಪ್ರಶಾಂತ್ ರಾಯ್, ಆರ್. ಕಿರಣ್, ಚಂದ್ರು ಗೆಡ್ಡೆ, ಎಸ್. ಕುಮಾರೇಶ್ , ಕೇಶವ, ಎಂ. ರಾಕೇಶ್, ಕೆ.ಎಲ್. ಪವನ್, ರಾಹುಲ್, ಕೇಬಲ್ ಲೋಕೇಶ್, ಜಿ. ಕಿರಣ್, ಪತ್ರೇಶ್ ಸೂರಿ ಸುನಿಲ್ ಹಾಗೂ ಬಳಗದ ಸಂಚಾಲಕರುಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















