ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಕೊರೋನಾ ಲಾಕ್‌ಡೌನ್ ಸಡಿಲಗೊಳಿಸಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸಾರಿಗೆ ಬಸ್ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು, 45 ದಿನಗಳ ನಂತರ ಇಂದು ಬೆಳಗ್ಗಿನಿಂದ ನಗರದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚಾರ ಆರಂಭಿಸಿವೆ.
ವಿಭಾಗೀಯ ಅಧಿಕಾರಿ ಸತೀಶ್ ಮಾತನಾಡಿ, ಸುಮಾರು 60 ಜನ ಚಾಲಕ ಮತ್ತು ನಿರ್ವಾಹಕರು ಮಾತ್ರ ಲಸಿಕೆ ಪಡೆದಿದ್ದು, ಅವರು ಮಾತ್ರ ಇಂದಿನಿಂದ ಕರ್ತವ್ಯ ನಿರ್ವಹಿಸಲಿದ್ದಾರೆ. ಮೈಸೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಬಸ್ ಸೌಲಭ್ಯ ಇರುವುದಿಲ್ಲ. ಇನ್ನು ಬೆಂಗಳೂರಿಗೆ ಎರಡು ಬಸ್‌ಗಳು ಮಾತ್ರ ಸಂಚರಿಸಲಿದೆ ಎಂದು ತಿಳಿಸಿದರು.
ಬೆಂಗಳೂರು, ದಾವಣಗೆರೆ, ಹರಿಹರ, ಚಿಕ್ಕಮಗಳೂರು, ಹುಬ್ಬಳ್ಳಿ, ಚಿತ್ರದುರ್ಗ ಹೀಗೆ ಶಿವಮೊಗ್ಗ ಜಿಲ್ಲೆಗೆ ಹತ್ತಿರವಿರುವ ಜಿಲ್ಲೆಗಳಿಗೆ ಬಸ್‌ಗಳು ಇಂದಿನಿಂದ ಸಂಚರಿಸಲಿವೆ ಎಂದು ತಿಳಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post