ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
2024ರ ಶಿವಮೊಗ್ಗ-ಭದ್ರಾವತಿ ನಡುವೆ ಪ್ರಯಾಣಿಸುತ್ತಿದ್ದ ಯುವತಿ ಬಸ್’ನಿಂದ ಬಿದ್ದು ಮೃತಪಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಯುವತಿಯ ಕುಟುಂಬಕ್ಕೆ ಕೆಎಸ್’ಆರ್’ಟಿಸಿ ಪರಿಹಾರ ವಿತರಣೆ ಮಾಡಿದೆ.

2024ರ ಅಕ್ಟೋಬರ್ 22 ರಂದು ಶಿವಮೊಗ್ಗ -ಭದ್ರಾವತಿ ಮಾರ್ಗದ ಬಸ್ನಲ್ಲಿ ಪಯಣಿಸುತ್ತಿದ್ದ ಭದ್ರಾವತಿ ತಾಲೂಕು ಬೈಪಾಸ್ ರಸ್ತೆ, ಹಳೇ ಭಂಡಾರಹಳ್ಳಿ ಗ್ರಾಮ ವಾಸಿ ಕು. ಹೇಮಾವತಿ (19) ಯುವತಿ ಬಸ್’ನಿಂದ ಕೆಳಗೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ. 10 ರಂದು ಹೇಮಾವತಿ ತಂದೆ ರಮೇಶ್ ಎಂಬುವವರಿಗೆ ಅಪಘಾತ ಪರಿಹಾರ ನಿಧಿಯಿಂದ ರೂ. 10 ಲಕ್ಷಗಳ ಚೆಕ್ ಅನ್ನು ಕೆಎಸ್’ಆರ್’ಟಿಸಿ ಶಿವಮೊಗ್ಗ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಟಿ.ಆರ್. ನವೀನ್ ಅವರು ಹಸ್ತಾಂತರ ಮಾಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post