ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕುಂಸಿ-ಆನಂದಪುರ ಮಧ್ಯೆ ಬರುವ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ನಂ.92(ಕಿ.ಮೀ: 103/900-104/100) ರಲ್ಲಿ ತಾಂತ್ರಿಕವಾಗಿ ಪರಿಶೀಲನೆ ಮಾಡುವುದರಿಂದ ಡಿ.9ರ ಸಂಜೆ 7 ಗಂಟೆಯಿಂದ ಡಿ.10 ರ ಬೆಳಿಗ್ಗೆ 7 ಗಂಟೆವರೆಗೆ ತಾತ್ಕಾಲಿಕವಾಗಿ ಪರ್ಯಾಯ ಮಾರ್ಗ ವ್ಯವಸ್ಥೆ ಮಾಡಲಾಗಿದೆ.
ಪರ್ಯಾಯ ಮಾರ್ಗ ಹೀಗಿದೆ:
ರಿಪ್ಪನಪೇಟೆ, ಗರ್ತಿಕೆರೆ, ಮೂಗುಡ್ತಿ, 5ನೇ ಮೈಲಿಕಲ್ಲು ಹಾಗೂ ಹಾರನಹಳ್ಳಿ, ಗುಳು ಗುಳಿ ಶಂಕರ, ಬೆಳ್ಳೂರು, ಮೂಗುಡ್ತಿ, ರಿಪ್ಪನಪೇಟೆ ಈ ಪರ್ಯಾಯ ಮಾರ್ಗದಲ್ಲಿ ವಾಹನಗಳು ಸಂಚರಿಸಬಹುದೆಂದು ಅಧಿಸೂಚನೆಯನ್ನು ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ ಹೊರಡಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post