ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕುವೆಂಪು ವಿಶ್ವವಿದ್ಯಾಲಯದ #Kuvempu University 2025-26 ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಪದವಿ ಮತ್ತು ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್ಗಳ ಪ್ರವೇಶಾತಿಗೆ ಸಂಬಂಧಿಸಿದಂತೆ ಯುಯುಸಿಎಂಎಸ್ ಪೋರ್ಟಲ್ ಮೂಲಕ ಆಹ್ವಾನಿಸಿದ ಅರ್ಜಿಯ ಅವಧಿಯನ್ನು ವಿಸ್ತರಿಸಲಾಗಿದೆ.
ಅರ್ಜಿ ಸಲ್ಲಿಸಲು ಆ.8 ಕೊನೆಯ ದಿನಾಂಕವಾಗಿದೆ. ಆ.18 ರಂದು ಮೆರಿಟ್ ಆಧಾರಿತ ಪಟ್ಟಿ ಬಿಡುಗಡೆ ಮಾಡಲಾಗುವುದು. ಆ. 20 ರಂದು ಪ್ರವೇಶಾತಿ ಕೌನ್ಸಿಲಿಂಗ್ ಮತ್ತು ಮೆರಿಟ್ ಹಾಗೂ ಸ್ಪೆಷಲ್ ಕೆಟಗರಿ, ಆ.21 ರಂದು ಮೆರಿಟ್ ಕಮ್ ಪೇಮೆಂಟ್ ಹಾಗೂ ಆ.22 ರಂದು ವರ್ಗಾವಣೆಗೆ ಕೊನೆಯ ದಿನಾಂಕ ವಾಗಿದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಶೈಕ್ಷಣಿಕ ವಿಭಾಗದ ಉಪ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post