ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದಾವಣಗೆರೆ ಇವರ ಸಹಕಾರದೊಂದಿಗೆ ಕಲಾವಿದ ಮಹಾಲಿಂಗಪ್ಪ ಎ. (ಮಾಲಿ) ದಾವಣಗೆರೆ ಇವರಿಂದ ಬಿ.ಹೆಚ್.ರಸ್ತೆಯ ಕರ್ನಾಟಕ ಸಂಘದಲ್ಲಿ ಇಂದು ಮತ್ತು ನಾಳೆ ಹಮ್ಮಿಕೊಳ್ಳಲಾದ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಕುವೆಂಪು ವಿವಿ ಕುಲಪತಿಗಳಾದ ಡಾ.ಬಿ.ಪಿ. ವೀರಭದ್ರಪ್ಪ ಉದ್ಘಾಟಿಸಿದರು.
ಉದ್ಘಾಟನಾ ಸಮಾರಂಭದ ಪೂರ್ವದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸ್ಥಳದಲ್ಲಿಯೇ ಚಿತ್ರರಚನಾ ಸ್ಪರ್ಧೆಗಳನ್ನು ಸಹ ಶಿವಮೊಗ್ಗ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಸಹಯೋಗದಲ್ಲಿ ಏರ್ಪಡಿಸಲಾಗಿತ್ತು.
Also read: ಮಕ್ಕಳ ಹಕ್ಕುಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ: ರಾಜಣ್ಣ ಸಂಕಣ್ಣನವರ್ ಕರೆ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಎನ್.ಸುಂದರ್‌ರಾಜ್ ವಹಿಸಿದ್ದರು. ಚಿತ್ರಕಲಾವಿದರಾದ ಪದ್ಮಶ್ರೀ ಹೆಗಡೆ, ಹಾಲಪ್ಪ ದಾವಣಗೇರಿ, ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ದೀಪು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















