ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಈಚೆಗೆ ಕೊಪ್ಪದಲ್ಲಿ ನಡೆದ 2021-22 ನೇ ಸಾಲಿನ ಕುವೆಂಪು ವಿಶ್ವವಿದ್ಯಾನಿಲಯದ ಅಂತರ ಕಾಲೇಜು ಕುಸ್ತಿ ಪಂದ್ಯಾವಳಿಯಲ್ಲಿ ಶಿರಾಳಕೊಪ್ಪ ಪ್ರಥಮ ದರ್ಜೆ ಕಾಲೇಜು ಮೂರು ಪ್ರಥಮ ಸ್ಥಾನ, ಮೂರು ತೃತೀಯ ಸ್ಥಾನ ಪಡೆದಿದೆ.
ಇ.ಚ್. ಪ್ರಮೋದ 74 ಕೆಜಿ ವಿಭಾಗದಲ್ಲಿ, ಮಾರುತಿ 79 ಕೆಜಿ ವಿಭಾಗದಲ್ಲಿ, ರವೀಂದ್ರ 72+ ಕೆಜಿ ವಿಭಾಗದಲ್ಲಿ, ಸಿ. ಆಕಾಶ್ 68 ಕೆಜಿ ವಿಭಾಗ, ಎ.ಬಿ. ಬಾಲರಾಜ್ 57 ಕೆಜಿ, ಪಿ.ಎ. ಕಿರಣ್ 65 ಕೆಜಿ ವಿಭಾಗದಲ್ಲಿ ಪ್ರಶಸ್ತಿ ಪಡೆದಿದ್ದಾರೆ.
ಇವರಿಗೆ ಪ್ರಾಂಶುಪಾಲ ಪ್ರಭಾಕರ್ ಮಂಟೂರ್ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಕಾಲೇಜು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರು ಅಭಿನಂದನೆ ಸಲ್ಲಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post