ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಂಕರಘಟ್ಟ: ಪಂಜಾಬ್-ಹರಿಯಾಣ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಮತ್ತು ಮಾಜಿ ರಾಜ್ಯಪಾಲ ಎಂ. ರಾಮಾ ಜೋಯಿಸ್ ವಿಧಿವಶರಾದದ್ದು ಶಿವಮೊಗ್ಗ ಜಿಲ್ಲೆ ಮತ್ತು ದೇಶಕ್ಕೆ ಆದ ನಷ್ಟ ಎಂದು ಕುವೆಂಪು ವಿವಿಯ ಕುಲಪತಿ ಪ್ರೊ. ಬಿ.ಪಿ.ವೀರಭದ್ರಪ್ಪ ಸಂತಾಪ ಸೂಚಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆಯಲ್ಲಿ ಜನಿಸಿದ ಜೋಯಿಸ್ ಅವರು ದೇಶದ ಖ್ಯಾತ ವಕೀಲರಾಗಿ ಹಾಗೂ ನ್ಯಾಯಮೂರ್ತಿಗಳಾಗಿ ಹೆಸರುಮಾಡುವ ಮೂಲಕ ಜಿಲ್ಲೆಗೆ ಖ್ಯಾತಿ ತಂದಿದ್ದರು ಎಂದಿದ್ದಾರೆ.
ನ್ಯಾಯ ವ್ಯವಸ್ಥೆಗಷ್ಟೇ ಸೀಮಿತಗೊಳ್ಳದೇ ಲೇಖಕರಾಗಿ, ಕನ್ನಡಪರವಾದ ನಿಲುವುಗಳಿಂದಾಗಿ ಹಾಗೂ ತಮ್ಮ ರಾಜಕೀಯ ಮುತ್ಸದಿತನದಿಂದಾಗಿಯೂ ಸಮಾಜಕ್ಕೆ, ದೇಶಕ್ಕೆ ಅಪಾರ ಕೊಡುಗೆ ನೀಡಿದ್ದರು. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಅದರ ವಿರುದ್ಧ ಹೋರಾಡಿದ ಮಹನೀಯರುಗಳ ಪರ ವಕಾಲತ್ತು ವಹಿಸಿ ಪ್ರಜಾಪ್ರಭುತ್ವ ಸ್ಥಾಪನೆಗೂ ಅವರ ಕೊಡುಗೆ ಮನನೀಯ ಎಂದು ಹೇಳಿದ್ದಾರೆ.
ಅವರಲ್ಲಿದ್ದ ಕರ್ತವ್ಯ ನಿಷ್ಠೆ, ಸಾಮಾಜಿಕ ಕಳಕಳಿ, ಸರಳತಾ ಮನೋಭಾವ ಮತ್ತು ಆಳವಾದ ಕಾನೂನು ಜ್ಞಾನ ಇಂದಿನ ಯುವಪೀಳಿಗೆಗೆ ಅನುಕರಣೀಯ ಎಂದು ಕುಲಪತಿ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post