ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕುವೆಂಪು ವಿಶ್ವವಿದ್ಯಾಲಯದ Kuvempu University 2020-21ನೇ ಸಾಲಿನಲ್ಲಿ ನಡೆದ ಅಂತಿಮ ವರ್ಷದ ಬಿಸಿಎ ಮತ್ತು ಬಿಎಸ್ಸಿ ವಿಭಾಗಗಳ ಪರೀಕ್ಷೆಯಲ್ಲಿ ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿಯ ಎಸ್.ಆರ್.ನಾಗಪ್ಪಶೆಟ್ಟಿ ಸ್ಮಾರಕ ರಾಷ್ಟ್ರೀಯ ಅನ್ವಯಿಕ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ನಾಲ್ಕು ರ್‍ಯಾಂಕ್ ಪಡೆದಿದ್ದಾರೆ.

ಬಿಸಿಎ ವಿಭಾಗದಲ್ಲಿ ಎಂ.ಪಿ. ಸಮೀಕ್ಷಾ (ಎರಡನೇ), ನಿಶಾಂತ್ .ಎನ್. ಪೈ (ಆರನೇ), ಜಿ.ಆರ್. ಶಿವಕುಮಾರ್ (ಹತ್ತನೇ) ಹಾಗೂ ಬಿಎಸ್ಸಿ ಪರೀಕ್ಷೆಯಲ್ಲಿ ಎಂ.ಎಂ. ವಿನಯ (ಹತ್ತನೇ) ರ್‍ಯಾಂಕ್ ಪಡೆದಿದ್ದಾರೆ. ಇವರಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















