ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ : ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ಗಣಿತಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ. ಬಿ. ಜೆ. ಗಿರೀಶ್ ಅವರು 2021ನೇ ಸಾಲಿಗೆ ಪ್ರತಿಷ್ಠಿತ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಉತ್ತರ ಪ್ರದೇಶದ ಪ್ರಯಾಗರಾಜ್ ಮೂಲದ ಸಂಸ್ಥೆಯು ದೇಶದ ಮಂಚೂಣಿಯ ವಿಜ್ಞಾನಿಗಳ ಶೈಕ್ಷಣಿಕ ವಿಚಾರ ವಿನಿಮಯದ ಪ್ರಮುಖ ವೇದಿಕೆಯಾಗಿದ್ದು, ಮೂಲ ಮತ್ತು ಅನ್ವಯಿಕ ವಿಜ್ಞಾನ ಕುರಿತ ಸಂಶೋಧನೆ, ಪ್ರಕಟಣೆ ಮತ್ತು ವಿಚಾರ ಸಂಕಿರಣಗಳ ಆಯೋಜನೆ ಮೂಲಕ ಶೈಕ್ಷಣಿಕ ವಲಯದಲ್ಲಿ ಕ್ರಿಯಾಶೀಲವಾಗಿದೆ.
2021ನೇ ಸಾಲಿನಲ್ಲಿ ಜೈವಿಕ ವಿಜ್ಞಾನ ವಿಭಾಗದಡಿ ದೇಶದ 26 ವಿಜ್ಞಾನಿಗಳು ಆಯ್ಕೆಯಾಗಿದ್ದರೆ, ಭೌತಿಕ ವಿಜ್ಞಾನ ವಿಭಾಗದಡಿ 24 ಮಂದಿ ಆಯ್ಕೆಯಾಗಿದ್ದು ಗಿರೀಶ್ ಕೂಡ ಪಟ್ಟಿಯಲ್ಲಿದ್ದಾರೆ. ದೇಶದ ಸಂಶೋಧಕರು ಮತ್ತು ವಿಜ್ಞಾನಿಗಳ ಆಯಾ ವರ್ಷದ ಸಂಶೋಧನಾ ಚಟುವಟಿಕೆ ಮತ್ತು ಸಂಶೋಧನಾ ಪ್ರಕಟಣೆಗಳ ಗುಣಮಟ್ಟವನ್ನು ಪರಿಗಣಿಸಿ ಅಕಾಡೆಮಿಗೆ ಆಯ್ಕೆ ಮಾಡಲಾಗುತ್ತದೆ. ಗಿರೀಶ್ ಅವರ ಸಂಶೋಧನಾ ಚಟುವಟಿಕೆಗಳಿಗೆ ರಾಷ್ಟ್ರಮಟ್ಟದ ಮನ್ನಣೆ ದೊರಕಿರುವುದಕ್ಕೆ ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ, ಕುಲಸಚಿವೆ ಜಿ. ಅನುರಾಧ, ಪರೀಕ್ಷಾಂಗ ಕುಲಸಚಿವ ಪ್ರೊ. ತ್ಯಾಗರಾಜ ಅಭಿನಂದನೆ ಸಲ್ಲಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post