ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕುವೆಂಪು ವಿಶ್ವವಿದ್ಯಾಲಯ ನಡೆಸಿದ ಎಂಎಸ್ಸಿ ಮನಃಶಾಸ್ತ್ರ ವಿಭಾಗದ ಸ್ನಾತಕೋತ್ತ ವಿಭಾಗದಲ್ಲಿ ನಗರದ ಮಾನಸ ಟ್ರಸ್ಟ್’ನ ಕಟೀಲು ಅಶೋಕ ಪೈ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರಿಗೆ ರ್ಯಾಂಕ್ ಲಭಿಸಿದೆ.
2021-22ನೆಯ ಸಾಲಿನಲ್ಲಿ ನಡೆದ ಪರೀಕ್ಷೆಯಲ್ಲಿ ಕಾಲೇಜಿನ ವಿದ್ಯಾರ್ಥಿನಿಯರಾದ ವಿ. ಗಾಯತ್ರಿ ಪ್ರಥಮ ಹಾಗೂ ಎಂ. ದೇವಿಕಾ ಎರಡನೆಯ ರ್ಯಾಂಕ್ ಗಳಿಸಿದ್ದಾರೆ.
ಜುಲೈ 22ರಂದು ನಡೆಯಲಿರುವ ವಿಶ್ವವಿದ್ಯಾನಿಲಯದ 33ನೆಯ ಘಟಿಕೋತ್ಸವದಲ್ಲಿ ಗಾಯತ್ರಿ ಅವರು ಪ್ರಥಮ ರ್ಯಾಂಕಿನ ಪ್ರಶಸ್ತಿ ಪತ್ರವನ್ನು ಪಡೆಯಲಿದ್ದಾರೆ.
Also read: ದೇಶದ ಎಲ್ಲಾ ನಾಗರಿಕರಿಗೂ ಜಿಎಸ್ಟಿ ಬಗೆಗಿನ ಅರಿವು ಅತ್ಯಗತ್ಯ: ಡಾ. ನಾಗರಾಜ ಅಭಿಪ್ರಾಯ
ಕಾಲೇಜಿನ ಸ್ನಾತಕೋತ್ತರ ಮನಃಶಾಸ್ತ್ರದ ಮೊದಲ ಬ್ಯಾಚ್’ನಲ್ಲಿಯೇ ಶೇ.100 ಫಲಿತಾಂಶ ಹಾಗೂ ಎರಡು ರ್ಯಾಂಕ್ಗಳು ಲಭ್ಯವಾಗಿರುವುದು ಹೆಮ್ಮೆಯಾಗಿದೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.
ಕಟೀಲ್ಅಶೋಕ್ ಪೈ ಕಾಲೇಜಿನಲ್ಲಿ ಮನಃಶಾಸ್ತ್ರ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಮಾನಸ ಆಸ್ಪತ್ರೆಯ ಮೂಲಕ ಕ್ಲಿನಿಕಲ್ ಹಾಗೂ ಕೌನ್ಸಲಿಂಗ್ ಕೌಶಲ್ಯಗಳು, ಮನಃಶಾಸ್ತçದ ಸಂಶೋಧನಾ ಕೌಶಲ್ಯಗಳ ನೇರ ತರಬೇತಿ ಸಿಗುತ್ತದೆ. ಆದ್ದರಿಂದ ಈ ಕಾಲೇಜಿನಲ್ಲಿ ಸ್ನಾತಕೋತ್ತರ ಸೈಕಾಲಜಿ ಪೂರೈಸಿದ ಎಲ್ಲಾ ವಿದ್ಯಾರ್ಥಿಗಳಿಗೂ ನೇರವಾಗಿ ಉದ್ಯೋಗ ದೊರೆತಿದೆ.
ಈ ಕುರಿತಂತೆ ಮಾತನಾಡಿದ ಮಾನಸ ಟ್ರಸ್ಟ್ ನಿರ್ದೇಶಕರಾದ ರಜನಿ ಎ. ಪೈ, ಇದೊಂದು ಅತ್ಯುತ್ತಮ ಶೈಕ್ಷಣಿಕ ಸಾಧನೆಯಾಗಿದ್ದು, ನಮ್ಮ ಕಾಲೇಜಿಗೆ ಕೀರ್ತಿ ತಂದ ಈ ವಿದ್ಯಾರ್ಥಿಗಳ ಬಗ್ಗೆ ಹೆಮ್ಮೆ ಪಡುತ್ತೇವೆ ಎಂದರು.ರ್ಯಾAಕ್ ಪಡೆದ ಎಲ್ಲ ವಿದ್ಯಾರ್ಥಿನಿಯರನ್ನು ಮಾನಸ ಟ್ರಸ್ಟ್ನ ಡಾ. ರಜನಿ ಎ. ಪೈ, ಡಾ. ಪ್ರೀತಿ ವಿ. ಶಾನ್ಭಾಗ್, ಡಾ.ವಾಮನ್ ಶಾನ್ ಭಾಗ್, ಸಿಸ್ಟರ್ ಮಾರೀ ಇವ್ಲಿನ್, ಡಾ.ರಾಜೇಂದ್ರಚೆನ್ನಿ, ಡಾ. ಅರ್ಚನಾ ಭಟ್ ಕೆ., ಹಾಗೂ ಪ್ರಾಂಶುಪಾಲರಾದ ಡಾ. ಸಂಧ್ಯಾಕಾವೇರಿ ಅಭಿನಂದಿಸಿದ್ದಾರೆ. ಕಾಲೇಜಿನ ಎಲ್ಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ರ್ಯಾಂಕ್ ವಿಜೇತರನ್ನು ಅಭಿನಂದಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post