ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ “ಅಕ್ಕ ಕೆಫೆ” #Akka Cafe ಎಂಬ ಮಹಿಳೆಯರೆ ನಡೆಸುವ ಕ್ಯಾಂಟೀನ್‌ಗಳನ್ನು ಸ್ಥಾಪಿಸುವ ಮೂಲಕ ಆರ್ಥಿಕವಾಗಿ ಸ್ವಾವಲಂಭಿಯಾಗಲು ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲಾಗುತ್ತಿದೆ.
ಡೇ-ನಲ್ಮ್ ಯೋಜನೆಯಡಿ ರಚನೆಯಾದಂತಹ ಗುಂಪುಗಳು “ಅಕ್ಕ ಕೆಫೆ” ಹಾಗೂ “ಅಕ್ಕ ಬೇಕ್” ಪ್ರಾರಂಭಿಸಲು ಅರ್ಜಿ ಆಹ್ವಾನಿಸಲಾಗಿದೆ.
Also read: ಐಲ್ಯಾಂಡೇ ನಮ್ಮದು ಎನ್ನುವ ಹಂತಕ್ಕೆ ವಕ್ಫ್ ಬೋರ್ಡ್ ಬಂದಿದೆ: ಎಂಪಿ ರಾಘವೇಂದ್ರ ಕಿಡಿ
ಆಸಕ್ತರು ನಿಗದಿತ ನಮೂನೆ ಅರ್ಜಿಯನ್ನು ಶಿವಮೊಗ್ಗ ಮಹಾನಗರ ಪಾಲಿಕೆ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿ ಡಿ. 11 ರೊಳಗಾಗಿ ಸಲ್ಲಿಸುವಂತೆ ಪಾಲಿಕೆ ಉಪ ಆಯುಕ್ತರು (ಆಡಳಿತ) ತಿಳಿಸಿರುತ್ತಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post