ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪೌರಾಣಿಕ ಹಿನ್ನಲೆ ಇರುವ ಶಿವಮೊಗ್ಗ ಸಮೀಪದ ತುಂಗಾನದಿ ತಟದಲ್ಲಿರುವ ಮಹೇಂದ್ರಗಿರಿ ಕ್ಷೇತ್ರ (ಪಿಳ್ಳಂಗಿರಿ) ಪಿಳ್ಳಂಗಿರಿ ಹನುಮಂತ ದೇವರ ಸನ್ನಿಧಿಯಲ್ಲಿ ಆಗಸ್ಟ್ 23 ಶನಿವಾರದಂದು ಕೊನೆಯ ಶ್ರಾವಣ ಶನಿವಾರ ಪ್ರಯುಕ್ತ ವಿಶೇಷ ಪೂಜೆ ಜರುಗಲಿದೆ.
ಹನುಮಂತ ದೇವರ ಅಭಿಷೇಕದ ಪವಿತ್ರ ತೀರ್ಥ ಸ್ನಾನ ಹಾಗು ಹನುಮಂತ ದೇವರ ಉತ್ಸವ ಮೂರ್ತಿ ದೇವಸ್ಥಾನ ಪ್ರಾಂಗಣದಲ್ಲಿ ಮಂಗಳವಾದ್ಯ, ಭಜನೆಯೊಂದಿಗೆ ಉತ್ಸವ ಹೊರಡುತ್ತದೆ. ಹನುಮಂತ ದೇವರ ಪುಣ್ಯ ತೀರ್ಥ ಸ್ನಾನದಿಂದ ಶನಿ ಪ್ರಭಾವ ಕಡಿಮೆಯಾಗುವ ಜೊತೆಗೆ ಶತ್ರು ಭೂತ ಪ್ರೇತ ಭಯಗಳು ದೂರವಾಗುತ್ತದೆ ಎಂದು ನಂಬಲಾಗಿದೆ. ಪ್ರದಕ್ಷಣೆ ನಂತರ ಉತ್ಸವ ಮೂರ್ತಿಯಿಂದ ಹೇಳಿಕೆಗಳನ್ನು ಕೇಳಲು ಭಕ್ತರಿಗೆ ಅವಕಾಶವಿದೆ.
ಕೊನೆ ಶ್ರಾವಣ ಶನಿವಾರದ ಪವಿತ್ರ ದಿನದಂದು ಹನುಮಂತ ದೇವರಿಗೆ ಹೂವು , ತುಳಸಿ ಅರ್ಪಿಸಿ ಸ್ವಾಮಿಗೆ ವಿಶೇಷ ಅಲಂಕಾರ ಪ್ರಸಾದ ಸೇವೆಗಳನ್ನು ಮಾಡಿಸಬಹುದು ಆಸಕ್ತ ಭಕ್ತರು 9902719392 ಸಂಖ್ಯೆಗೆ ಕರೆ ಮಾಡಿ ತಿಳಿಸಬಹುದೆಂದು ಅಧ್ಯಕ್ಷರು ಪಿಳ್ಳನಗಿರಿ ಶ್ರೀ ಹನುಮಂತ ದೇವರ ವ್ಯವಸ್ಥಾಪನಾ ಸಮಿತಿ ತಿಳಿಸಿದೆ.
ಪೌರಾಣಿಕ ಹಿನ್ನಲೆ
ಅಹಲ್ಯ ಮೇಲೆ ಇಂದ್ರನಿಗೆ ವ್ಯಾಮೋಹವಾಗುತ್ತದೆ ದೇಹ ಸ್ಪರ್ಶದ ಕಾರಣದಿಂದ ಇಂದ್ರನಿಗೆ ಗೌತಮ ಮಹರ್ಷಿಗಳು ಶಾಪ ನೀಡುತ್ತಾರೆ. ಶಾಪ ವಿಮೋಚನೆಗಾಗಿ ಇಂದ್ರ ಎಲ್ಲಾ ಪುಣ್ಯ ಕ್ಷೇತ್ರಗಳ ದರ್ಶನ ಮಾಡುತ್ತಾನೆ ಆದರೆ ಎಲ್ಲಿಯೂ ಶಾಪ ವಿಮೋಚನೆಯಾಗದೆ ಉತ್ತಾರಭಿಮುಖವಾಗಿ ಹರಿಯುತ್ತಿರುವ ತುಂಗಾ ನದಿ ತೀರಕ್ಕೆ ಬರುತ್ತಾನೆ ಅಲ್ಲಿನ ಪ್ರಾಕೃತಿಕವಾದ ಸೌಂದರ್ಯ ಕಂಡು ಇದೇ ಶಾಪ ವಿಮೋಚನೆಗೆ ಪ್ರಾಶಸ್ತವಾದ ಸ್ಥಳ ಎಂದು ನಿರ್ಧರಿಸಿ ಪರಮೇಶ್ವರನನ್ನು ಕುರಿತು ತಪಸ್ಸು ಮಾಡುತ್ತಾನೆ ಇಂದ್ರನ ತಪಸ್ಸಿಗೆ ಪ್ರತ್ಯಕ್ಷನಾದ ಈಶ್ವರ ತಿಂಗಳ ಕಾಲ ತುಂಗಾ ನದಿಯಲ್ಲಿ ಮಿಂದು ವಿಷ್ಣುವನ್ನು ಕುರಿತು ತಪಸ್ಸು ಮಾಡುವಂತೆ ಹೇಳುತ್ತಾನೆ ಪರಮೇಶ್ವರನ ಆಜ್ಞೆಯಂತೆ ಇಂದ್ರ ತುಂಗಾ ನದಿಯಲ್ಲಿ ಮಿಂದು ತಿಂಗಳ ಕಾಲ ವಿಷ್ಣುವನ್ನು ಕುರಿತು ತಪಸ್ಸು ಮಾಡಿ ಶಾಪ ವಿಮೋಚನೆ ಹೊಂದುತ್ತಾನೆ ಇಂದ್ರನು ವಿಷ್ಣುವನ್ನು ಕುರಿತು ತಪಸ್ಸು ಮಾಡುವಾಗ ಪ್ರತಿಷ್ಠಾಪಿಸಿದ ವಿಗ್ರಹವೇ ಈಗ ಪಿಳ್ಳಂಗಿರಿ ಶ್ರೀರಂಗನಾಥ ಸ್ವಾಮಿ ಎಂದು ಪ್ರಸಿದ್ಧಿ ಪಡೆದಿದೆ.
ಅಕ್ಷೋಭ್ಯ ತೀರ್ಥರಿಗೆ ಕಂಡ ಆಂಜನೇಯ
ಆಂಜನೇಯನ ಪರಮ ಭಕ್ತರಾದ ಕೂಡಲಿ ಮಠದ ಅಕ್ಷೋಭ್ಯ ತೀರ್ಥ ಶ್ರೀಪಾದಂಗಳು ಆಂಜನೇಯನ ಉಪಾಸನೆ ಮಾಡದೆ ನೀರನ್ನೂ ಸಹ ಸೇವಿಸುತ್ತಿರಲಿಲ್ಲ.
ಒಮ್ಮೆ ಪಿಳ್ಳಂಗಿರಿ ಬೆಟ್ಟದಲ್ಲಿರುವ ರಂಗನಾಥನ ದರ್ಶನಕ್ಕೆ ಆಗಮಿಸುತ್ತಾರೆ ಅಕ್ಷೋಭ್ಯ ತೀರ್ಥರು ಬಂದ ಸಂಧರ್ಭದಲ್ಲಿ ತಮ್ಮ ಆರಾದ್ಯ ದೈವ ಹನುಮಂತನ ಸಾನಿಧ್ಯ ಕಾಣವುದಿಲ್ಲ ಆಗ ಶ್ರೀರಂಗನಾಥ ಸ್ವಾಮಿ ದೇವಾಲಯದ ಹಿಂದೆ ಇರುವ ಕಲ್ಲು ಬಂಡೆಯ ಮೇಲೆ ತಮ್ಮ ಹಣೆಯಲ್ಲಿದ್ದ ಅಂಗಾರದಿಂದ ಹನುಮಂತನ ಚಿತ್ರ ರಚಿಸುತ್ತಾರೆ ನಂತರ ನಿತ್ಯಕರ್ಮ ಮುಗಿಸಲು ತುಂಗಾ ನದಿಗೆ ತೆರಳುತ್ತಾರೆ. ನಿತ್ಯ ಕರಮ್ ಮುಗಿಸಿ ಬಂದ ಅಕ್ಷೋಭ್ಯ ತೀರ್ಥರಿಗೆ ಹನುಮಂತ ದೇವರು ಪ್ರತ್ಯಕ್ಷರಾಗಿ ವರವನ್ನು ಬೇಡಿಕೊಳ್ಳಲು ಹೇಳುತ್ತಾರೆ. ಅಕ್ಷೋಭ್ಯ ತೀರ್ಥರು ನಾನು ಬ್ರಾಹ್ಮೀಭೂತರಾದ ನಂತರ ನಿನ್ನ ಬಕ ಪಾದದಡಿಯಲ್ಲಿ ಇರಲು ಸ್ಥಳವನ್ನು ಕೋರುತ್ತಾರೆ ಇಲ್ಲಿ ಆಂಜನೇಯ ಸ್ವಾಮಿ ಬಂಡೆಯಿಂದ ಒಡಮೂಡಿದ್ದು ದೇಹವು ದಕ್ಷಿಣಾಭಿಮುಖವಾಗಿ ಮುಖ ಪೂರ್ವಾಭಿಮುಖವಾಗಿದೆ ಬಲಗಾಲಿನ ಬಳಿ ಶ್ರೀಅಕ್ಷೋಭ್ಯ ತೀರ್ಥ ಪಾದಂಗಳ ಆಕೃತಿ ಮೂಡಿದೆ. ಇಂದಿಗೂ ನಾವು ಪಿಳ್ಳನಗಿರಿ ಕ್ಷೇತ್ರದಲ್ಲಿರುವ ಹನುಮಂತ ದೇವರ ಸನ್ನಿಧಿಯಲ್ಲಿ ಅಕ್ಷೋಭ್ಯ ತೀರ್ಥರನ್ನು ಕಾಣಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post