ತಾಯಿ ಮಕ್ಕಳ ಆರೋಗ್ಯ ಅತಿ ಮುಖ್ಯ ಆರೋಗ್ಯವಂತ ಮಕ್ಕಳು ಈ ದೇಶದ ಉತ್ತಮ ಪ್ರಜೆಗಳಾಗಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ MP Raghavendra ಹೇಳಿದ್ದಾರೆ.
ಭಾರತದಲ್ಲಿ ಭೂ ತಾಯಿಗೆ ಹೆಚ್ಚು ಗೌರವ ಕೊಡುತ್ತೇವೆ. ಭೂ ತಾಯಿಗೆ ಉಡಿ ತುಂಬುವಂತೆ ಇಂದು ತಾಯಂದಿರಿಗೆ ಉಡಿ ತುಂಬಿದ ಕಾರ್ಯಕ್ರಮ ಮಾಡುತ್ತಿದ್ದಾರೆ. ಇದು ತಾಯಂದಿರಿಗೆ ಸಂತೋಷ ಉಂಟು ಮಾಡುವ ಸಂಭ್ರಮದ ಕಾರ್ಯಕ್ರಮ. ತಾಯಂದಿರು, ಮಕ್ಕಳು ಆರೋಗ್ಯದಿಂದ ಇರಬೇಕು. ನಾಳೆ ಹುಟ್ಟುವ ಮಕ್ಕಳು ಜಾತಿ ಮತ ಮರೆತು ನಮ್ಮ ದೇಶಕ್ಕೆ ಉತ್ತಮ ಗೌರವ ತರುವ ಪ್ರಜೆಗಳಾಗಲಿ. ದೇವರು ತಾಯಂದಿರಿಗೆ ಮಕ್ಕಳಿಗೆ ಉತ್ತಮ ಆರೋಗ್ಯ ಮತ್ತು ಭವಿಷ್ಯ ನೀಡಲು ಶಕ್ತಿ ಕೊಡಲಿ ಎಂದರು.
Also read: ಸೊರಬ: ಸಾರ್ವಜನಿಕರ ಮೈನವಿರೇಳಿಸಿದ ಹೋರಿ ಬೆದರಿಸುವ ಹಬ್ಬ
ಸರ್ಜಿ ಫೌಂಡೇಶನ್ ಮುಖ್ಯಸ್ಥ ಡಾ. ಧನಂಜಯ ಸರ್ಜಿ Dr. Dhananjaya Sarji ಮಾತನಾಡಿ, ನಮ್ಮ ಧರ್ಮದಲ್ಲಿ ಅನೇಕ ಆಚರಣೆ. ಮನೆ ಮುಂದೆ ಸಗಣಿ ಸಾರಿಸುತ್ತಿದ್ದರು. ರಂಗೋಲಿ ಹಾಕುತ್ತಿದ್ದರು. ಸಗಣಿ ಸಾರಿಸಿದರೆ ಕ್ರಿಮಿ ಬರಲ್ಲ. ಹಿಟ್ಟಿನ ರಂಗೋಲಿಯಿಂದ ಇರುವೆಗಳಿಗೆ ಆಹಾರ. ದೇವರಿಗೆ ತೆಂಗಿನ ಕಾಯಿ ಒಡೆಯುತ್ತೇವೆ. ಕಾಯಿ ಒಳಗಿರುವುದು ಪ್ರಪಂಚ. ಅದರೊಳಗಿನ ನೀರು ಪ್ರೋಕ್ಷಣೆ ಮಾಡುವುದು ಅರಿಷಡ್ವರ್ಗ ನಾಶ ಆಗಲಿ ಅಂತ ಎಂದರು.
ಸೀಮಂತ, ಗರ್ಭ ಸಂಸ್ಕಾರ ಸೇರಿ ನಲವತ್ತು ಸಂಸ್ಕಾರ ಇತ್ತು. ಈಗ ಹದಿನಾರು ಉಳಿದಿದೆ. ಹುಟ್ಟಿನಿಂದ ಸಾವಿನವರೆಗೆ ಸಂಸ್ಕಾರ ಇದೆ. ಗರ್ಭಧಾರಣಾ ಸಂಸ್ಕಾರ ಸಹ ಇದೆ. ಸೀಮಂತದ ನಂತರ ಗರ್ಭಿಣಿ ಸ್ತ್ರೀಯನ್ನು ತಾಯಿ ಮನೆಗೆ ಕಳಿಸುತ್ತಾರೆ. ತಾಯಿ ಮನೆ ಸ್ವಾತಂತ್ರ್ಯ ಹೆಚ್ಚು. ವಿಶ್ರಾಂತಿ ಸಿಗಲಿ ಎಂದು. ಇದೊಂದು ಸಂಪ್ರದಾಯ. ಗರ್ಭಸಂಸ್ಕಾರ ಸರಿಯಾಗಿ ಅನುಸರಿಸಿದರೆ ಸಹಜ ಹೆರಿಗೆ ಸಾಧ್ಯತೆ ಹೆಚ್ಚು ಎಂದರು.
ಶಾಶ್ವತಿ ಮಹಿಳಾ ವೇದಿಕೆಯ ಶಾಂತ ಸುರೇಂದ್ರ ಮಾತನಾಡುತ್ತಾ, ಪ್ರಪಂಚದಲ್ಲಿ ಹುಟ್ಟಿದ ಮೇಲೆ ಆರೋಗ್ಯ ಇರಬೇಕು. ಇಲ್ಲಾಂದ್ರೆ ಯಾವ ಸಾಧನೆ ಆಗಲ್ಲ. ಒಂದಾಗಿ ಸಮಾಜ ಕಟ್ಟೋಣ. ತಾಳ್ಮೆ,. ಸಜ್ಜನಿಕೆ ಸನ್ನಡತೆ ಮಕ್ಕಳಿಗೆ ಕಲಿಸಬೇಕು. ಸಮಾಜಮುಖಿ ಕಾರ್ಯಕ್ರಮ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಶಾಶ್ವತಿ ಮಹಿಳಾ ವೇದಿಕೆಯ ಹಾಗೂ ಒಕ್ಕಲಿಗರ ಸಂಘದ ಮಹಿಳಾ ಘಟಕದ ಪ್ರಮುಖರಾದ ಪ್ರತಿಮಾ ಡಾಕಪ್ಪ ಗೌಡ, ಚಂದ್ರಮತಿ ಹೆಗಡೆ ಮತ್ತಿತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















