ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಭಾರತದಲ್ಲೇ ಉಜ್ವಲವಾದ ಸ್ಥಾನವಿದೆ. ಕರ್ನಾಟಕದ ಹೆಸರು ವ್ಯಾಸ ಭಾರತದಲ್ಲೇ ಉಲ್ಲೇಖವಾಗಿದ್ದು, ಕನ್ನಡ ಭಾಷೆಗೆ 200 ವರ್ಷಕ್ಕಿಂತಲೂ ಹೆಚ್ಚು ಮಿಗಿಲಾದ ಇತಿಹಾಸವಿದೆ ಎಂದು ಪಿಇಎಸ್ ಐಟಿಎಮ್‌ನ ಪ್ರಾಂಶುಪಾಲ ಚೈತನ್ಯ ಕುಮಾರ್ ತಿಳಿಸಿದರು.
ಪಿಇಎಸ್ ಪಬ್ಲಿಕ್ ಶಾಲಾ ಆವರಣದಲ್ಲಿ ನಡೆದ 67ನೇ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ಅವರು, ಸರ್ವಾಜನಾಂಗದ ಶಾಂತಿಯ ತೋಟ ನಮ್ಮ ನಾಡು, ಎಲ್ಲಾದರೂ ಇರು ಎಂತಾದರೂ ಇರು ಎಂದೆದಿಗೂ ನೀ ಕನ್ನಡವಾಗಿರು ಎಂಬಂತೆ ನಾವು ದೇಶದ ಯಾವುದೇ ಮೂಲೆಯಲ್ಲಿದ್ದರು ಕನ್ನಡವನ್ನು ಉಳಿಸಿ ಬೆಳೆಸುವ ಸಂಸ್ಕೃತಿ ಪ್ರತಿಯೊಬ್ಬ ಕನ್ನಡಿಗನದಾಗಲಿ ಹಾರೈಸಿದರು.

Also read: ‘ಅವ್ವರಸಿ’ಯಶಸ್ವಿ ಪ್ರದರ್ಶನ: ಮನಸೂರೆಗೊಂಡ ಡಾ. ಲೀಲಾ ಬಸವರಾಜು ಅವರ ಏಕವ್ಯಕ್ತಿ ಪ್ರಯೋಗ
ಪಿಇಎಸ್ ಪಾಲಿಟೆಕ್ನಿಕ್, ಪಿಇಎಸ್ ಐಎಎಮ್‌ಎಸ್, ಪಿಇಎಸ್ ಪಿಯುಸಿ ಹಾಗೂ ಪಿಇಎಸ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲರುಗಳು, ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥರು, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.












Discussion about this post