ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಚಿಂತೆ ಮಾಡಬೇಡಿ, ಚಿಂತನೆ ಮಾಡಿ ಎಂದು ಬಾಳಗಾರು ಶ್ರೀಮದ್ ಆರ್ಯಾಅಕ್ಷೋಭ್ಯ ಮಠದ ಕಿರಿಯ ಪೀಠಾಧೀಶರಾದ ಶ್ರೀ ಅಕ್ಷೋಭ್ಯ ರಾಮಪ್ರಿಯ ತೀರ್ಥ ಶ್ರೀಪಾದಂಗಳವರು ನುಡಿದರು.
ಶಿವಮೊಗ್ಗ ಅಷ್ಟೋತ್ತರ ಬಳಗದವರು ಸಂಯೋಜಿಸಿದ” ಜ್ಞಾನ ಪ್ರಸರಣ ಸಪ್ತಾಹದ” ಮೂರನೇ ದಿನದ ಕಾರ್ಯಕ್ರಮದಲ್ಲಿ “ನೀವೂ ಚಿಂತೆ ಮಾಡುವಿರಾ” ಎಂಬ ವಿಷಯದ ಕುರಿತು ಗಾಯತ್ರಿ ದೇವಸ್ಥಾನದಲ್ಲಿ (ಅಕ್ಟೋಬರ್ 6 ರಂದು) ಉಪನ್ಯಾಸ ನೀಡಿದರು.
ಶ್ರೀಗಳು ಮುಂದುವರಿದು ಮಾತನಾಡುತ್ತಾ ಪರಿಹಾರವಿಲ್ಲದ ಚಿಂತೆಯನ್ನು ಬಿಟ್ಟುಬಿಡಿ, ಬಿಡಿಸಲಾರದ ಸಮಸ್ಯೆಯನ್ನು ಸಂತೋಷದಿಂದ ಒಪ್ಪಿಕೊಳ್ಳಿರಿ ಎಂದ ಶ್ರೀಗಳು “ಅನುಗಾಲವು ಚಿಂತೆ ಜೀವಕ್ಕೆ” ಎಂಬ ದಾಸವಾಣಿ, ಸಾಮಾನ್ಯ ಜನರ ಸ್ವಭಾವವನ್ನು ತಿಳಿಸುತ್ತದೆ. ಗೃಹಸ್ಥರ ಚಿಂತೆಗೆ, ಚಿಂತನೆ ಅಂದರೆ ಮುನ್ನಾಲೋಚನೆ ಅವಶ್ಯವಾಗಿ ಇರಲೇಬೇಕು, ಇದರಿಂದ ಸುಲಭವಾಗಿ ಜೀವನ ಸಾಗಿಸಬಹುದು ಎಂದ ಶ್ರೀಗಳು ಚಿಂತನೆಗೂ ವಿರಾಮ ಉಂಟು ಎಂದರು.
ಚಿಂತೆ ಮನುಷ್ಯನ ದೌರ್ಬಲ್ಯವನ್ನು ತೋರಿಸುತ್ತದೆ ಅದನ್ನು ಮೆಟ್ಟಿ ನಿಲ್ಲಿರಿ, ಮೋಹವನ್ನು ಬಿಡಿ, ಹಚ್ಚಿಕೊಂಡವರಿಗೇ ದುಃಖ,ಅದನ್ನು ಬಿಟ್ಟವರು ಆರಾಮಾಗಿರುತ್ತಾರೆ ಎಂದು ಹೇಳಿದ ಶ್ರೀಯವರು ಹಗ್ಗ ಜಗ್ಗಾಟ ಆಟವನ್ನು ಉದಹರಿಸಿದರು. ನಿಮ್ಮ ನಿಮ್ಮ ಕರ್ತವ್ಯ ಬಿಡಬೇಡಿ ಮಾಡಿ, ಜೀವನ ಎಂಬುದು ಒಂದು ಅಮೃತ ಮಥನವಿದ್ದಂತೆ ಮಥನದಲ್ಲಿಯ ಹಗ್ಗ ಎಂದರೆ ಜೀವನದ ಸೂತ್ರವು, ಅದರಲ್ಲಿ ಕರ್ತವ್ಯ ಮಾಡಬೇಕು, ಧೀರರಿಗೆ ದೇವರ ಸಹಾಯ ಇದ್ದೇ ಇರುತ್ತದೆ ಎಂದರು.
ತಾಲೂಕು ಬ್ರಾಹ್ಮಣ ಸೇವಾ ಸಂಘದವರು ಈ ಕಾರ್ಯಕ್ರಮದ ಆಯೋಜಕತ್ವವನ್ನು ವಹಿಸಿಕೊಂಡಿದ್ದರ ಜೊತೆಗೆ ಕಾರ್ಯಕ್ರಮ ನಿರ್ವಹಣೆ ಮಾಡಿದರು.ಅಷ್ಟೋತ್ತರ ಬಳಗದವತಿಯಿಂದ ಅಧ್ಯಕ್ಷ ಮತ್ತು ಕಾರ್ಯದರ್ಶಿ ಇವರಿಗೆ ಶ್ರೀಗಳು ಶಾಲೂ ಹೊದಿಸಿ ಫಲ ಮಂತ್ರಾಕ್ಷತೆ ನೀಡಿದರು.ಬಾಳಗಾರು ಶ್ರೀಗುರುರಾಜ್ ಅವರು ಶ್ರೀಗಳ ಕಿರು ಪರಿಚಯ ಮಾಡಿದರು.
ಶೇಷಗಿರಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾರ್ಯಕ್ರಮಕ್ಕೆಬಂದ ಎಲ್ಲರಿಗೂ ಶ್ರೀಗಳು ಫಲ ಮಂತ್ರಾಕ್ಷತೆ ನೀಡಿದರು.ಅಷ್ಟೋತ್ತರ ಬಳಗದ ಸದಸ್ಯರಾದ ಅಚ್ಚುತರಾವ್, ರಾಘವೇಂದ್ರ ಆನವಟ್ಟಿ, ಮಧ್ವೇಶ, ರಾಘವೇಂದ್ರ ವೈದ್ಯ, ವೇದವ್ಯಾಸ, ಧಿರೇಂದ್ರ ಆಚಾರ್, ರಮೇಶ್ ಧ್ರುವ ಹಾಗೂ ಭಜನಾ ಮಂಡಳಿ ಸದಸ್ಯರು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post