ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಹುಲ್ ಗಾಂಧಿ #Rahul Gandhi ಶಿವಮೊಗ್ಗಕ್ಕೆ ಬರಬೇಕು ಎಂಬುದು ನನ್ನ ಆಸೆ. ಅವರು ಎಲ್ಲಿಲ್ಲಿ ಕಾಲಿಟ್ಟದ್ದಾರೋ ಅಲ್ಲೆಲ್ಲ ಸೋತಿದ್ದು, ಈಗ ಶಿವಮೊಗ್ಗಕ್ಕೆ ಬರುತ್ತಾರೆ ಎಂದರೆ ದಯವಿಟ್ಟು ಬೇಗ ಕರೆಸಿ ಎಂದು ಕೆ.ಎಸ್. ಈಶ್ವರಪ್ಪ #K S Eshwarappa ವ್ಯಂಗ್ಯವಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ಸಿನಿಮಾ ನಟರ ಬಗ್ಗೆ ಅಪಾರ ಗೌರವ ಇದೆ. ನಟರನ್ನು ನೋಡಲು ಜನರು ಬರುತ್ತಾರೆ ವಿನಾ ಅವರು ಬಂದ ಮಾತ್ರಕ್ಕೆ ಕಾಂಗ್ರೆಸ್’ಗೆ ಮತ ಕೊಡುವುದಿಲ್ಲ. ಯಡಿಯೂರಪ್ಪ #Yadiyurappa ಅವರೇ ರಾಘವೇಂದ್ರ #Raghavendra ಅವರನ್ನು ಗೆಲ್ಲಿಸಿಕೊಡುವ ಸಲುವಾಗಿ ಗೀತಾ ಅವರನ್ನು ಇಲ್ಲಿಗೆ ಹಾಕಿಸಿಕೊಂಡು ಬಂದಿದ್ದಾರೆ. ಹೀಗಾಗಿ ಕಾಂಗ್ರೆಸ್, ಬಿಜೆಪಿ ಪರಸ್ಪರ ಟೀಕೆ ಮಾಡಿಕೊಳ್ಳುವುದಿಲ್ಲ. ಇಬ್ಬರು ಸೇರಿ ನನ್ನನ್ನು ಟೀಕೆ ಮಾಡುತ್ತಿದ್ದಾರೆ. ಇವರಿಬ್ಬರ ಸೋಲು ಖಚಿವಾಗಿದೆ ಎಂದರು.
Also read: ಮೇ 2ರಂದು ಶಿವವಮೊಗ್ಗಕ್ಕೆ ರಾಹುಲ್ ಗಾಂಧಿ | ಏನೆಲ್ಲಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ?

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news















Discussion about this post