ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪ್ರತಿಯೊಂದು ತಂತ್ರಜ್ಞಾನದ ಪ್ರಗತಿಯಲ್ಲಿ ಗಣಿತ ವಿಜ್ಞಾನ ಅವಶ್ಯಕ ವಿಚಾರವಾಗಿದ್ದು ಅನ್ವಯಿಕ ಗಣಿತದ ಸಂಶೋಧನಾ ವಿಸ್ತರಣೆ ಹೆಚ್ಚಾಗಲಿ ಎಂದು ಎನ್.ಐ.ಟಿ.ಕೆ ಸೂರತ್ಕಲ್ ಪ್ರಾದ್ಯಾಪಕರಾದ ಡಾ.ಬಿ.ಆರ್. ಶಂಕರ್ ಅಭಿಪ್ರಾಯಪಟ್ಟರು.
ಇಂದು ಜೆಎನ್‌ಎನ್‌ಸಿ ಎಂಜಿನಿಯರಿಂಗ್ ಕಾಲೇಜಿನ ಗಣಿತ ವಿಜ್ಞಾನ ವಿಭಾಗದ ವತಿಯಿಂದ ಏರ್ಪಡಿಸಿದ್ದ ಗಣಿತ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ಇತ್ತೀಚಿನ ಪ್ರಗತಿಗಳ ಕುರಿತ ಎರಡು ದಿನಗಳ ಅಂತರಾಷ್ಟ್ರೀಯ ಕಾರ್ಯಾಗಾರವನ್ನು ಆನ್ಲೈನ್ ಮೂಲಕ ಉದ್ದೇಶಿಸಿ ಅವರು ಮಾತನಾಡಿದರು.
ಯಾವುದೇ ಸಂಶೋಧನೆಯ ಮೂಲ ಬೇರೆಂದರೆ ಅನ್ವಯಿಕ ಗಣಿತ ವಿಜ್ಞಾನ. ಹೊಸ ತಂತ್ರಜ್ಞಾನಗಳ ಕ್ರಮಾವಳಿಗಳ ಕುರಿತು ನಮ್ಮ ವಿದ್ಯಾರ್ಥಿಗಳು ಅರಿವು ಪಡೆಯಬೇಕಿದೆ. ಇದರಿಂದಾಗಿ ಗಣಿತ ಸೇರಿದಂತೆ ವಿವಿಧ ವೈಜ್ಞಾನಿಕ ಪ್ರಯೋಗಗಳನ್ನು ನಡೆಸಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕುವೆಂಪು ವಿಶ್ವವಿದ್ಯಾಲಯ ಪ್ರಾದ್ಯಾಪಕರಾದ ಡಾ.ಬಿ.ಜೆ.ಗಿರೀಶ್, ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಎ.ಎಸ್.ವಿಶ್ವನಾಥ, ಖಜಾಂಚಿಗಳಾದ ಸಿ.ಆರ್.ನಾಗರಾಜ, ಜೆ.ಎನ್.ಎನ್.ಸಿ.ಇ ಕಾಲೇಜಿನ ಪ್ರಾಂಶುಪಾಲರಾದ ಡಾ.ಪಿ.ಮಂಜುನಾಥ, ಇನ್ಫ್ರಾಸ್ಟ್ರಕ್ಚರ್ ಡೀನ್ ಡಾ.ಎಂ.ಎಂ.ರಜತ್ ಹೆಗಡೆ, ಗಣಿತ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ.ನಿರ್ಮಲಾ.ಟಿ, ಕಾರ್ಯಾಗಾರದ ಸಂಯೋಜಕ ಡಾ.ಕೃಷ್ಣಮೂರ್ತಿ. ಎಂ.ಆರ್ , ಅನಿಲ್.ಎಸ್.ಸಿ, ಪಂಡಿತ್ ಗಿರಿ ಮೋಹನ ದಾಸ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post